ಕುಣಿಗಲ್: ಗಾಂಧಿ ಜಯಂತಿ ಅಂಗವಾಗಿ ಯಡಿಯೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಜಲಧಿಗೆರೆಯ ಬ್ಯಾಟರಂಗಸ್ವಾಮಿ ದೇವಾಲಯ ಆವರಣ ಸೇರಿದಂತೆ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಪಂ ಇಒ ನಾರಾಯಣ ಮಾತನಾಡಿ, ಯಡಿಯೂರು ಗ್ರಾಮ ಪಂಚಾಯಿತಿ ಸ್ವಚ್ಛತಾ ಹೀ ಸೇವಾ ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದ್ದು ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಪಿಡಿಒ ಚಂದ್ರಹಾಸ್ ಮಾತನಾಡಿ, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ ಯಡಿಯೂರು ಗ್ರಾಮ ಪಂಚಾಯಿತಿ ಆಯ್ಕೆಯಾಗಲು ಯಡಿಯೂರು ಗ್ರಾಮಸ್ಥರು, ಪಂಚಾಯಿತಿ ಸಿಬ್ಬಂದಿ, ಆಡಳಿತ ವರ್ಗ ಎಲ್ಲರ ಶ್ರಮವಿದೆ, ಸ್ವಚ್ಛತೆ ನಿರ್ವಹಣೆಯಲ್ಲಿ ಗ್ರಾಮಸ್ಥರ ಪಾತ್ರ, ಸಹಕಾರ ಹಾಗೂ ಜವಾಬ್ದಾರಿ ಹೆಚ್ಚಿರುತ್ತದೆ, ಸಮರ್ಪಕವಾಗಿ ಸ್ವಚ್ಛತೆ ನಿರ್ವಹಣೆಯಾದಲ್ಲಿ ಅದರಿಂದ ಗ್ರಾಮಸ್ಥರಿಗೂ ಪರೋಕ್ಷವಾಗಿ ಸಾಕಷ್ಟು ಅನುಕೂಲಗಳಿವೆ ಎಂಬುದ ಮರೆಯಬಾರದು ಎಂದರು.
ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ತ್ಯಾಜ್ಯ ವಿಲೇವಾರಿ ಸಮಗ್ರವಾಗಿ ಅನುಷ್ಠಾನ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಸ್ವಚ್ಛತೆ ಕ್ರಮಗಳ ಬಗ್ಗೆ ಪಿಡಿಒ ಅರಿವು ಮೂಡಿಸಿದರು, ಗ್ರಾಪಂ ಸದಸ್ಯರಾದ ದೀಪು, ಕೃಷ್ಣಮೂರ್ತಿ, ವೆಂಕಟೇಶ್, ಪ್ರಕಾಶ ಹಾಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
Comments are closed.