ಸಿಎಂ ಆರೋಗ್ಯ ಸುಧಾರಣೆಗಾಗಿ ವಿಶೇಷ ಪೂಜೆ

110

Get real time updates directly on you device, subscribe now.

ಕುಣಿಗಲ್: ಮುಖ್ಯಮಂತ್ರಿ ಯಡಿಯೂರಪ್ಪನವರ ಆರೋಗ್ಯ ಸುಧಾರಣೆಯಾಗಲೆಂದು ಹಾರೈಸಿ ಪಟ್ಟಣದ ಕೋಟೆ ಪ್ರದೇಶದಲ್ಲಿನ ತುಡಿಕೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬಿಜೆಪಿ ಪುರಸಭೆ ಸದಸ್ಯರು, ಕಾರ್ಯಕರ್ತರು ವಿಶೇಷ ಪೂಜೆ ನೆರವೇರಿಸಿ ಅನ್ನದಾನ ಮಾಡಿದರು.
ಪುರಸಭೆ ಬಿಜೆಪಿ ಸದಸ್ಯ ಕೋಟೆ ನಾಗಣ್ಣ, ಗೋಪಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ರಮೇಶ್, ಗ್ರಾಪಂ ಸದಸ್ಯ ಸುರೇಶ, ಮುಖಂಡರಾದ ನಾಗರಾಜು, ದೇವರಾಜು, ರೇಣುಕಪ್ಪ ಇತರರು ಮುಖ್ಯಮಂತ್ರಿಯವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಶೀಘ್ರ ಗುಣಮುಖರಾಗುವಂತೆ ಸಂಕಲ್ಪಿಸಿ ಅಭಿಷೇಕ, ಅರ್ಚನೆ ನೆರವೇರಿಸಿ ಪ್ರತಿವಾರವೂ ಅನ್ನದಾನ ನೆರವೇರಿಸುತ್ತಿದ್ದು, ಈ ಬಾರಿ ಯಡಿಯೂರಪ್ಪನವರ ಹೆಸರಿನಲ್ಲಿ ಅನ್ನದಾನ ನೆರವೇರಿಸಿದರು.
ಈ ವೇಳೆ ಕೋಟೆ ನಾಗಣ್ಣ ಮಾತನಾಡಿ ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ, ರಾಜ್ಯಸರ್ಕಾರ ಕೊವಿಡ್ ನಿಯಂತ್ರಣೆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಪ್ರಧಾನಿಗಳೆ ಶ್ಲಾಘಿಸಿದ್ದಾರೆ, ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ವೈದ್ಯರು, ತಜ್ಞರು ಮಾಸ್ಕ್ ಹಾಕುವಂತೆ, ಸಾಮಾಜಿಕ ಅಂತರ ಕಾಪಾಡಿ ಕೊರೊನಾ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಕರೆ ನೀಡಿದ್ದರೂ ಬಹುತೇಕ ಜನರ ನಿರ್ಲಕ್ಷ್ಯದಿಂದ ಇಂದು ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ದುರಾದೃಷ್ಟಕರ ಎಂದರು.
ಜಿಲ್ಲಾಬಿಜೆಪಿ ಉಪಾಧ್ಯಕ್ಷ ಕೆ.ರಮೇಶ್ ಮಾತನಾಡಿ, ಲಾಕ್ಡೌನ್ ಮಾಡುವಂತೆ ಎಲ್ಲರೂ ಸಲಹೆ ನೀಡುತ್ತಿದ್ದಾರೆ, ಆದರೆ ಲಾಕ್ಡೌನ್ ಸೋಂಕು ನಿಯಂತ್ರಣಕ್ಕೆ ಪರಿಹಾರವಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೇ ಜಾತಿ, ವರ್ಗ ನೋಡದೆ ಎಲ್ಲರೂ ಸರ್ಕಾರ ರೂಪಿಸುವ ಮಾರ್ಗಸೂಚಿಗಳನ್ನು ಪಾಲನೆ ಮಾಡಿದಾಗ ಸೋಂಕು ನಿಯಂತ್ರಣಕ್ಕೆ ಬಂದು ಎಲ್ಲರೂ ನೆಮ್ಮದಿಯುತ ಜೀವನ ನಡೆಸುವ ಜೊತೆಗೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಹೊಣೆಗಾರಿಗೆ ಎಲ್ಲರ ಮೇಲಿದೆ, ಕೇವಲ ಸರ್ಕಾರದ ಮೇಲೆ ಹೊರೆ ಹಾಕಿ ಜನ ತಮ್ಮ ಜವಾಬ್ದಾರಿ ಮರೆಯುವುದು ಸರಿಯಲ್ಲ ಎಂದರು.
ಸಿಎಂ ಯಡಿಯೂರಪ್ಪನವರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಅವರ ಮನೆ ದೇವರಾದ ಎಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸಹ ವಿಶೇಷ ಪೂಜೆ, ಅಭಿಷೇಕ ದೇವಾಲಯ ಸಮಿತಿ, ಅಭಿಮಾನಿಗಳು ನೆರವೇರಿಸಿದರು.

Get real time updates directly on you device, subscribe now.

Comments are closed.

error: Content is protected !!