ಅವೈಜ್ಞಾನಿಕ ರಸ್ತೆ ಕಾಮಗಾರಿ- ತೋಟಕ್ಕೆ ನುಗ್ಗುತ್ತೆ ನೀರು

5

Get real time updates directly on you device, subscribe now.


ಗುಬ್ಬಿ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಗುಬ್ಬಿ ತಾಲೂಕಿನ ಪತ್ರೆಮತಘಟ್ಟ ಗ್ರಾಮದ ಬಳಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಗುಬ್ಬಿ ತಾಲೂಕಿನ ಪತ್ರೆ ಮತಘಟ್ಟ ಗ್ರಾಮದ ಪಕ್ಕದಲ್ಲಿರುವ ಸುಮಾರು 60 ರಿಂದ 70 ರೈತರ ಅಡಿಕೆ ತೆಂಗು ತೋಟ ಮಳೆ ಬಂತು ಎಂದರೆ ಸಂಪೂರ್ಣವಾಗಿ ನೀರಿನಿಂದ ಜಲಾವೃತವಾಗುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಕೆಲಸ ನಿರ್ವಹಣೆ ಮಾಡಿದ್ದು ಕೆರೆಯಿಂದ ಬರುವಂತಹ ಮತ್ತು ಬೇರೆ ಬೇರೆ ಭಾಗಗಳಿಂದ ಬರುವ ನೀರನ್ನು ಸರಿಯಾದ ರೀತಿಯಲ್ಲಿ ವೈಜ್ಞಾನಿಕವಾಗಿ ಸೇತುವೆ ಅಳವಡಿಸಿಲ್ಲದ ಕಾರಣ ಮಳೆ ಬಿದ್ದಂತಹ ಸಂದರ್ಭದಲ್ಲಿ ಹಲವು ಭಾಗಗಳಿಂದ ಬರುವ ನೀರು ನೇರವಾಗಿ ತೋಟಗಳಿಗೆ ನುಗ್ಗುತ್ತಿದ್ದು ರೈತರು ಕಷ್ಟಪಟ್ಟು ಬೆಳೆದಿರುವ ಅಡಿಕೆ, ತೆಂಗು ಬೆಳೆ ನೀರಿನಿಂದ ಆವೃತವಾಗಿ ಸಂಕಷ್ಟಕ್ಕೆ ಈಡಾಗಿರುವ ಸ್ಥಿತಿ ನಿರ್ಮಾಣವಾಗುತ್ತಿದೆ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಂಸದರು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೂಡಲೇ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಿ ನಮ್ಮ ತೋಟಗಳನ್ನ ಉಳಿಸಬೇಕು ಎಂದು ರೈತರು ತಮ್ಮ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ದಿನೇಶ್ ಪತ್ರೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 73 ರಸ್ತೆಯಲ್ಲಿ ಸರ್ವೀಸ್ ರಸ್ತೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿದ್ದು ಅದಕ್ಕೆ ತಡೆಗೋಡೆ ಆಗಲಿ, ವ್ಯವಸ್ಥಿತ ರೀತಿಯಲ್ಲಿ ರಸ್ತೆ ಮಾಡಿಲ್ಲ, ಮಳೆ ಬಂದರೆ ಸಾಕು ಮಣ್ಣು ಕೊರೆದು ರಸ್ತೆ ಬದಿ ಕೊರೆದು ಅಪಘಾತಗಳಿಗೆ ಎಡೆ ಮಾಡಿಕೊಡುವ ರೀತಿಯಲ್ಲಿ ವಾತಾವರಣ ಸೃಷ್ಟಿಯಾಗಿದ್ದು, ಇದರ ಬಗ್ಗೆ ಜಿಲ್ಲಾಡಳಿತವಾಗಲಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಕೇಂದ್ರ ಸಚಿವರು ಈ ಭಾಗದಲ್ಲಿ ಓಡಾಡುತ್ತಿದ್ದರೂ ಗಮನ ಹರಿಸದೆ ತಾತ್ಸಾರ ಮನೋಭಾವನೆ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಈ ಕೂಡಲೇ ಸ್ಥಳಕ್ಕೆ ಧಾವಿಸಿ ಆಗಿರುವ ತೊಂದರೆ ನಿವಾರಿಸಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಒತ್ತಾಯ ಮಾಡಿದರು.

ಇದೇ ಸಂದರ್ಭದಲ್ಲಿ ರೈತರಾದ ಮೂರ್ತಪ್ಪ, ವಿನಯ್, ಜಯಣ್ಣ, ಸಂಪತ್, ಸುರೇಶ್, ವಜ್ರಪ್ಪ, ದಯಾನಂದ, ಬಾಬು, ಶಿವಲಿಂಗಯ್ಯ, ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!