ಲಿಂಕ್ ಕೆನಾಲ್ ವಿರೋಧ ಒಳ್ಳೆಯದಲ್ಲ: ಶಾಸಕ

25

Get real time updates directly on you device, subscribe now.


ಕುಣಿಗಲ್: ತಾಲೂಕಿಗೆ ಸಮಗ್ರ ನೀರಾವರಿಗೆ ಪೂರಕವಾದ ಲಿಂಕ್ ಕೆನಾಲ್ ಕಾಮಗಾರಿಗೆ ತಾಲೂಕಿನ ವಿರೋಧ ಪಕ್ಷದ ಮುಖಂಡರು ಗುಬ್ಬಿ, ತುರುವೇಕೆರೆಯವರೊಂದಿಗೆ ಸೇರಿಕೊಂಡು ವಿರೋಧಿಸುವಲ್ಲಿ ಅರ್ಥ ಇಲ್ಲ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.

ಗುರುವಾರ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟುದಾರರಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ಸಮ್ಮುಖದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಚ್ಚುಕಟ್ಟುದಾರ ರೈತರನ್ನು ದ್ದೇಶಿಸಿ ಮಾತನಾಡಿ, ತಾವು ಶಾಸಕರಾಗಿ ಆರು ವರ್ಷವಾಗಿದೆ, ಮನೆ ಒಡೆಯುವ, ಜಮೀನು ವಿವಾದದಲ್ಲಿ ಕೇಸು ಹಾಕಿಸುವ ಕೆಟ್ಟ ರಾಜಕಾರಣ ಮಾಡಿಲ್ಲ, ತಾಲೂಕಿನ ಮಗನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಚಿಂತನೆ ನಡೆಸಿ, ಮಾಜಿ ಸಂಸದ ಡಿ.ಕೆ.ಸುರೇಶ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಒಂದು ಸಾವಿರ ಕೋಟಿ ಲಿಂಕ್ ಕೆನಾಲ್ ಕಾಮಗಾರಿ ಅನುಷ್ಠಾನ ಮಾಡಿಸಿದ್ದು ತಾಲೂಕಿನವರೆ ಆದ ವಿರೋಧ ಪಕ್ಷಗಳು ವಿನಾಕಾರಣ ಅಡ್ಡಪಡಿಸುವುದು ಸರಿಯಲ್ಲ, ಅವರು ಸಹ ಈ ತಾಲೂಕಿನ ಮಣ್ಣಿನ ಮಕ್ಕಳಿಗೆ ಉತ್ತರ ನೀಡಬೇಕಿದೆ, ನೀರು ಸರಾಗವಾಗಿ ಹರಿಯುವುದು ಅವರಿಗೆ ಬೇಕಿಲ್ಲ ಎನಿಸುತ್ತದೆ, ಏನೇ ಆದರೂ ಲಿಂಕ್ ಕೆನಾಲ್ ಕಾಮಗಾರಿಯ ಫಲ ಅವರೆ ಪಡೆದುಕೊಂಡು ಕಾಮಗಾರಿಗೆ ಸಹಕಾರ ನೀಡಲಿ, ರೈತರು ಇವರ ಧೋರಣೆ ಗಮನಿಸಬೇಕು ಎಂದರು.

ಉಪ ವಿಭಾಗಾಧೀಕಾರಿ ಗೌರಕುಮಾರ್ ಶೆಟ್ಟಿ, ತಹಶೀಲ್ದಾರ್ ರಶ್ಮಿ, ಹೇಮಾವತಿ ನಾಲಾ ವಲಯದ ಯಡಿಯೂರು ವಿಭಾಗದ ಇಇ ಶ್ರೀನಿವಾಸಯ್ಯ, ಎಇಇ ರುದ್ರೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!