ಮಧುಗಿರಿ: ತಾಲೂಕಿನಲ್ಲಿ ಮಹಾಲಯ ಅಮಾವಾಸ್ಯೆ ದಿನ ರಾತ್ರಿ ಸುರಿದ ಮಳೆಯಿಂದಾಗಿ ಸಿದ್ದಾಪುರ ಕೆರೆ ಕೋಡಿ ಹರಿದು ಬಿಜವಾರ ಕೆರೆಯತ್ತಾ ನೀರು ಹರಿಯ ತೊಡಗಿದೆ.
ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಚೋಳೆನಹಳ್ಳಿ ಕೆರೆ ಈಗಾಗಲೇ ಭರ್ತಿಯಾಗಿದ್ದು, ಅದರ ಕೋಡಿ ನೀರು ತಾಲೂಕಿನ ಅತಿ ದೊಡ್ಡ ಕೆರೆಯಾದ ಬಿಜವರ ಕೆರೆಯತ್ತಾ ಸಾಗುತ್ತಿದೆ, ಈಗ ಸಿದ್ದಾಪುರ ಕೆರೆ ನೀರು ಸಾಗುತ್ತಿರುವುದರಿಂದ ಈ ಬಾರಿ ಬಿಜವರ ಕೆರೆ ತುಂಬಿಕೊಳ್ಳುವ ಎಲ್ಲಾ ಲಕ್ಷಣ ಕಂಡು ಬರುತ್ತದೆ .
ಅಚ್ಚುಕಟ್ಟುದಾರರಲ್ಲಿ ಭೀತಿ: ಈಗಾಗಲೇ ಬಿಜವರ ಕೆರೆ ಅರ್ಧ ಭಾಗ ತುಂಬಿದ್ದು ಕೆರೆ ಕೋಡಿಯ ಬಳಿ ಕೆಲವು ಕಲ್ಲು ಜರುಗಿರುವುದರಿಂದ ಈ ಕೂಡಲೇ ಸಂಬಂಧಪಟ್ಟ ಇಲಾಖೆ ಸರಿಪಡಿಸುವಂತೆ ಅಚ್ಚುಕಟ್ಟದಾರರು ಆಗ್ರಹಿಸಿದ್ದಾರೆ
ಪಟ್ಟಣದ ಅಂತರ್ಜಲ ವೃದ್ಧಿಸುವ ಸಿದ್ಧರಕಟ್ಟೆ ಕೆರೆ ಕೋಡಿ ನೀರು ಕೂಡ ಸತತವಾಗಿ ಹರಿಯುತ್ತಿದ್ದು ಮಧುಗಿರಿ ಪಟ್ಟಣದ ಕುಡಿಯುವ ನೀರಿನ ಜಲ ಎಂದೇ ಕರೆದುಕೊಳ್ಳುವ ತೆಂಗಿನ ಮರದ ಬಾವಿಯ ನೀರಿನ ಮಟ್ಟ ಕೈ ಎಟಕುವಷ್ಟಕ್ಕೆ ಬಂದಿರುವುದು ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳಿಂದ ಬೇಸಿಗೆಯನ್ನು ಮೀರಿಸುವಂತಹ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ರಾತ್ರಿ ಬಿದ್ದ ಮಳೆಯಿಂದಾಗಿ ತಂಪೇರಿಸಿದೆ.
ಶಿಘ್ರದಲ್ಲೆ ಕೆರೆಗಳಿಗೆ ಬಾಗಿನ: ತಾಲೂಕಿನ ಚೋಳೆನಹಳ್ಳಿ ಮತ್ತು ಸಿದ್ದಾಪುರ ಕೆರೆ ಕೋಡಿ ಹರಿದಿರುವುದರಿಂದ ಶೀಘ್ರದಲ್ಲೇ ಸಚಿವ ಕೆ.ಎನ್.ರಾಜಣ್ಣ ಅವರಿಂದ ಕೆರೆಗಳಿಗೆ ಬಾಗಿನ ಅರ್ಪಿಸಲಾಗುವುದೆಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದ್ದಾರೆ.
Comments are closed.