ಮನುಕುಲದ ಉಳಿವಿಗಾಗಿ ಪರಿಸರ ಸಂರಕ್ಷಿಸಿ

ಅರಣ್ಯ ನಾಶವಾದರೆ ವನ್ಯ ಜೀವಿಗಳೂ ನಾಶ: ಡಾ.ಪರಂ

2

Get real time updates directly on you device, subscribe now.


ತುಮಕೂರು: ಮನುಷ್ಯ ಮತ್ತು ಸಕಲ ಜೀವಸಂಕುಲಗಳು ಬದುಕುಳಿಯಬೇಕಾದರೆ ಪರಿಸರ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದ ಎಂಪ್ರೆಸ್ ಶಾಲೆ ಸಭಾಂಗಣದಲ್ಲಿ ನಡೆದ 70ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಿರುವ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಪ್ರಪಂಚದ ಹಸಿರು ಪದರ ಶೇಕಡಾ 30 ರಷ್ಟಿದ್ದು, ದೇಶದಲ್ಲಿ ಶೇ.21.6, ರಾಜ್ಯದಲ್ಲಿ ಶೇ.21.2 ಹಾಗೂ ಜಿಲ್ಲೆಯಲ್ಲಿ ಶೇ.15 ರಷ್ಟು ಮಾತ್ರ ಇದೆ, ಹಸಿರು ಪದರದ ಶೇಕಡ ಪ್ರಮಾಣ ಕಡಿಮೆಯಾಗಿ ಅನೇಕ ಜೀವ ಪ್ರಭೇದ ನಾಶದ ಅಂಚಿಗೆ ಬಂದು ನಿಂತಿವೆ, ಅರಣ್ಯ ನಾಶವಾದರೆ ವನ್ಯ ಜೀವಿಗಳೂ ನಾಶವಾಗುತ್ತವೆ, ವನ್ಯಜೀವಿಗಳನ್ನು ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆಯು ಪುಸ್ತಕ ಹಾಗೂ ಚಿತ್ರಗಳಲ್ಲಿ ಮಾತ್ರ ವನ್ಯ ಜೀವಿಗಳನ್ನು ನೋಡುವಂತಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ವೈಯಕ್ತಿಕ ಬದುಕು ಕಟ್ಟಿಕೊಳ್ಳಲು ಕಾಡುಗಳ ನಾಶ ಮಾಡುತ್ತಾ ಬಂದಿದ್ದೇವೆ, ಕಾಡುಗಳ ನಾಶದಿಂದ ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ನಿರಂತರ ಸಂಘರ್ಷ ಉಂಟಾಗುವಂತಾಗಿದೆ, ಈ ನಿಟ್ಟಿನಲ್ಲಿ ಶಾಲೆ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಅರಣ್ಯ ಪ್ರದೇಶ ಬೆಳೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆ, ಒತ್ತುವರಿ ತೆರವು, ವನ್ಯ ಜೀವಿ ಸಂರಕ್ಷಣೆ, ಉತ್ತಮ ನೆಡುತೋಪು ಬೆಳವಣಿಗೆ ಮತ್ತು ಸಂರಕ್ಷಣೆ ಸೇರಿದಂತೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಗುಬ್ಬಿ ಉಪ ವಲಯದ ಅರಣ್ಯಾಧಿಕಾರಿ ಶಿವಪ್ರಸಾದ್, ಗಸ್ತು ಅರಣ್ಯಪಾಲಕ ಶಿರಾ ವಲಯದ ಬಿ.ಸಿ.ಮಂಜುನಾಥ್, ಕೊರಟಗೆರೆ ವಲಯದ ಟಿ.ನಿಂಗರಾಜು, ಕುಣಿಗಲ್ ವಲಯದ ಶಿವರಾಜು ಹಾಗೂ ಆರ್.ಶೇಖರ್, ಕ್ಷೇಮಾಭಿವೃದ್ಧಿ ನೌಕರರಾದ ಚಿಕ್ಕನಾಯಕನಹಳ್ಳಿ ವಲಯದ ಡಿ.ಸಿ.ಕೆಂಪಯ್ಯ, ತುಮಕೂರು ವಲಯದ ಹೆಚ್.ಎಲ್.ಗಂಗಣ್ಣ, ತಿಪಟೂರು ವಲಯದ ಹೊನ್ನಯ್ಯ, ಪಾವಗಡ ವಲಯದ ಮೂಡ್ಲಗಿರಿಯಪ್ಪ, ಮಧುಗಿರಿ ವಲಯದ ಶಿವರಾಜು ಹಾಗೂ ಬುಕ್ಕಾ ಪಟ್ಟಣ ವಲಯದ ನೆಡುತೋಪು ಕಾವಲುಗಾರ ರಾಮಚಂದ್ರಪ್ಪ ಸೇರಿದಂತೆ ಒಟ್ಟು 11 ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಿವಕುಮಾರ್ ನಟರಾಜನ್, ದ್ವಿತೀಯ ಸ್ಥಾನ ಗಳಿಸಿದ ಪ್ರಶಾಂತ್ ಬಿ.ನಿರ್ವಾಣಿ ರಾವ್, ತೃತೀಯ ಸ್ಥಾನ ಗಳಿಸಿದ ಕಿರಣ್ ವಾಸುದೇವ್ ಮತ್ತು ಉಮಾಶಂಕರ್ ಅವರಿಗೆ ಬಹುಮಾನ ವಿತರಿಸಲಾಯಿತು.

ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ಷೆ ಬಿ.ವಿ.ಅಶ್ವಿಜ, ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್, ದೇವರಾಜ್, ಎನ್ ಸಿಸಿ ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!