ಕುಣಿಗಲ್: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಜೊತೆಯಲ್ಲಿ ಹೇಮಾವತಿ ನೀರು ಹರಿದ ಕಾರಣ ಪಟ್ಟಣದ ಇತಿಹಾಸ ಪ್ರಸಿದ್ದ ದೊಡ್ಡಕೆರೆ ತುಂಬಿ ಕೋಡಿಯಾಗಿದೆ.
ಕಳೆದ ನಾಲ್ಕು ವರ್ಷಗಳಿಂದಲೂ ದೊಡ್ಡಕೆರೆ ಕೋಡಿಯಾಗುತ್ತಿದ್ದು ಈ ಬಾರಿಯೂ ಕೋಡಿಯಾಗಿದೆ, ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶ ಸುಮಾರು 16 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶವಿದ್ದು ಅಚ್ಚುಕಟ್ಟು ಪ್ರದೇಶಕ್ಕೆ ದೊಡ್ಡಕೆರೆ ನೀರು ಕಳೆದ 16 ವರ್ಷಗಳಿಂದ ಹರಿಸಿಲ್ಲದ ಕಾರಣ ಕೆರೆ ನೀರು ಪಟ್ಟಣಕ್ಕೆ ಕುಡಿಯುವ ನೀರು ಬಳಕೆಗೆ ಮಾತ್ರ ನೀರು ಬಳಕೆಯಾಗಿ, ದೊಡ್ಡಕೆರೆ ನೀರು ಕೊಳೆಯುವಂತಾಗಿದೆ, ಪ್ರತಿವರ್ಷ ಕೆರೆ ತುಂಬಿದ ಮೇಲೆ ಶೇ.35 ಬಳಕೆ ಆಗಿ ಉಳಿಕೆ ಶೇ.65 ರಷ್ಟು ನೀರು ಸಂಗ್ರಹ ಹಾಗೆ ಇರುತ್ತದೆ, ಈ ಮಧ್ಯೆ ಅಚ್ಚಕಟ್ಟುದಾರರು ತಮ್ಮ ಪ್ರದೇಶಕ್ಕೆ ನೀರುಣಿಸುವಂತೆ ಒತ್ತಾಯಿಸಿದರೂ ಈ ನಿಟ್ಟಿನಲ್ಲಿ ಶಾಸಕರು ಸೇರಿದಂತೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ, ದೊಡ್ಡಕೆರೆ ತುಂಬಿದ ನಂತರ ಕೋಡಿಯಾದ ನೀರು ನಾಗಿನಿ ನದಿ ಮೂಲಕ ಹರಿದು ಮಂಗಳಾ ಜಲಾಶಯಕ್ಕೆ ಸೇರಿ ಅನಂತರ ಶಿಂಷಾ ನದಿ ಸೇರುತ್ತದೆ, ಹೇಮಾವತಿ ನಾಲಾ ಮೂಲ ಯೋಜನೆ ಪ್ರಕಾರ ಕುಣಿಗಲ್ ದೊಡ್ಡಕೆರೆ ನೀರು ಕೃಷಿ ಉದ್ದೇಶಕ್ಕೆ ಇದ್ದು ಇತ್ತೀಚೆಗೆ 550ಎಂಸಿಎಫ್ ಟಿ ಶೇಖರಣೆ ಸಾಮರ್ಥ್ಯದ ದೊಡ್ಡಕೆರೆ ನೀರಿನ ಪೈಕಿ 500 ಎಂಸಿಎಫ್ ಟಿ ಪೂರ್ತಾ ಕುಡಿಯಲು ಮೀಸಲಿಟ್ಟಿದ್ದು 50 ಎಂಸಿಎಫ್ ಟಿ ಡೆಡ್ ಸ್ಟೋರೇಜ್ ಗೆ ಮೀಸಲಿರಿಸಿದೆ ಎನ್ನಲಾಗಿದೆ, ಇದು ಅಚ್ಚುಕಟ್ಟುದಾರ ಪಾಲಿಗೆ ಮರಣ ಶಾಸನವಾಗಿದ್ದು ಈ ನಿಟ್ಟಿನಲ್ಲಿ ಅಚ್ಚಕಟ್ಟುದಾರರು ಸಂಘಟಿತರಾಗಿ ಹೋರಾಟ ಮಾಡದ ಕಾರಣ ಕೆಲವೆ ಮಂದಿ ಅಚ್ಚುಕಟ್ಟುದಾರರ ಕೂಗು ವ್ಯರ್ಥವಾಗಿದೆ, ಇನ್ನು ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶದ ಪ್ರಮುಖ ರಾಜಕಾಲುವೆಯಾದ ಲಕ್ಷ್ಮೀದೇವಿ ಹಂತದ ಕಾಲುವೆಗೆ ಪುರಸಭೆ ನಗರದ ಚರಂಡಿ ನೀರು ಬಿಟ್ಟಿರುವ ಕಾರಣ ಅಚ್ಚುಕಟ್ಟು ಪ್ರದೇಶಕ್ಕೆ ನಗರದ ಕೊಳಚೆ ನೀರು ಹರಿಯುವಂತಾಗಿದ್ದು, ಅಚ್ಚುಕಟ್ಟುದಾರರು ಪರದಾಡುವಂತಾಗಿದೆ, ಈ ನಿಟ್ಟಿನಲ್ಲಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದು ಅಚ್ಚುಕಟ್ಟುದಾರರ ಅಸಮಾಧಾನಕ್ಕೆ ಕಾರಣವಾಗಿದೆ.
Comments are closed.