ಕುಣಿಗಲ್: ಪುರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿ ನಿಯಂತ್ರಿಸಲು ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಕೈಗೊಳ್ಳದ ಕಾರಣ ಬೀದಿನಾಯಿಗಳು ನಾಗರಿಕರ ಮೇಲೆ ಎರಗುವ ಪ್ರಕರಣ ಹೆಚ್ಚಾಗುತ್ತಿದ್ದು ಯಾವುದೇ ಪ್ರಾಣ ಹರಣವಾಗುವ ಮುನ್ನ ಪುರಸಭೆ ಅಗತ್ಯ ಕ್ರಮ ಜರುಗಿಸಿ ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಕಳೆದ ಗುರುವಾರ 23ನೇ ವಾರ್ಡ್ನಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಬೀದಿ ನಾಯಿಗಳು ಎರಗಿದ್ದು ಬಿಡಿಸಲು ಹೋದ ಕೂಲಿ ಕಾರ್ಮಿಕನನ್ನು ಸಹ ಗಾಯಗೊಳಿಸಿವೆ, ಮಹಿಳೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ದಿನಂಪ್ರತಿ ನಾಯಿ ಕಡಿತ ಪಕ್ರರಣ ನಡೆಯುತ್ತಿದ್ದು ನಾಗರಿಕರು ಹೈರಾಣಾಗಿದ್ದಾರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ 2023ನೇ ಸಾಲಿನಲ್ಲಿ 3030 ಮಂದಿ ನಾಯಿಕಡಿತಕ್ಕೆ ಒಳಗಾಗಿ ಲಸಿಕೆ ಪಡೆದರೆ, 20204ರ ಸೆಪ್ಟಂಬರ್ ಅಂತ್ಯಕ್ಕೆ 2106 ಮಂದಿ ನಾಯಿ ಕಡಿತಕ್ಕೆ ಒಳಗಾಗಿ ಲಸಿಕೆ ಪಡೆದಿದ್ದಾರೆ, ಆಗಸ್ಟ್- 24 ರಲ್ಲಿ 194, ಸೆಪ್ಟಂಬರ್ 24ರಲ್ಲಿ 174ಮಂದಿ ನಾಯಿ ಕಡಿತಕ್ಕೆ ಒಳಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ, ಕೆಲವರು ಸಾರ್ವಜನಿಕ ಆಸ್ಪತ್ರೆಗೆ ಬಾರದೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದು ಈ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.
ಇತ್ತ ಪುರಸಭೆ ಎಬಿಸಿ ನಿಯಮಾವಳಿ ಪ್ರಕಾರ ನಿಯಂತ್ರಣ ಮಾಡುತ್ತೇವೆ ಎಂದು ಹೇಳಿತ್ತಿದ್ದು ಅತ್ತ ಸಾಮಾನ್ಯ ಜನರಿಗೆ ಬೀದಿ ನಾಯಿಗಳೆ ಮಾರಣಾಂತಿಕವಾಗುತ್ತಿದ್ದು ಸಮಸ್ಯೆ ಯಾವಾಗ ನಿಯಂತ್ರಣಕ್ಕೆ ಬರುತ್ತದೋ ಎಂದು ಕಾದು ನೋಡಬೇಕಿದೆ
Comments are closed.