ಜಾತಿ ಜನ ಗಣತಿ ಮರು ಪರಿಶೀಲನೆ ಮಾಡಿ: ಸ್ವಾಮೀಜಿ

9

Get real time updates directly on you device, subscribe now.


ಪಟ್ಟನಾಯಕನ ಹಳ್ಳಿ: ಜಾತಿ ಜನ ಗಣತಿ ಅನುಷ್ಠಾನಗೊಳಿಸುವ ಮುನ್ನ ರಾಜ್ಯ ಸರ್ಕಾರ ಮರು ಪರಿಶೀಲನೆ ಒಳಪಡಿಸುವ ಅಗತ್ಯವಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಪಟ್ಟನಾಯಕನ ಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ

ಶರನ್ನವರಾತ್ರಿ ಅಂಗವಾಗಿ ಸೋಮವಾರ ನಡೆದ ಧರ್ಮ ಧ್ವಜ ಪ್ರತಿಷ್ಠಾಪನ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸೇರಿದಂತೆ ನೂರಾರು ಸಣ್ಣ ಸಣ್ಣ ಸಮುದಾಯಗಳ ಆರ್ಥಿಕ, ಸಾಮಾಜಿಕ,
ಶೈಕ್ಷಣಿಕ ಪ್ರಗತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿ ಜನಗಣತಿ ಮತ್ತೊಮ್ಮೆ ವಸ್ತುನಿಷ್ಠತೆ ಹಾಗೂ ವೈಜ್ಞಾನಿಕವಾಗಿ ಮಾಡುವ ಅವಶ್ಯಕತೆ ಇದೆ ಎಂದರು.
ಮುಖಂಡರಾದ ತಮ್ಮಣ್ಣ, ನಿರಂಜನ್, ವೀರ ಕ್ಯಾತಪ್ಪ, ಶಾಮಣ್ಣ ಶೆಟ್ಟಿ, ರಾಮಲಿಂಗಪ್ಪ, ಮಂಜುನಾಥ ಗುಪ್ತ, ರಂಗಸ್ವಾಮಿ
ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!