ಮಧುಗಿರಿ: ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಅಲ್ಲಿಗೆ ಹೋಗಿರದಿದ್ದರೆ ಇನ್ನು 50 ವರ್ಷ ಕಳೆದರೂ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಯುತ್ತಿರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣಕ್ಕೆ ನೀರು ಒದಗಿಸುವ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿ, ಅಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ ರೀತಿ ಇದೆ, ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗಲೇ ಅಲ್ಲಿನ ಪರಿಸ್ಥಿತಿ ನನ್ನ ಗಮನಕ್ಕೆ ಬಂದದ್ದು, ದಕ್ಷ ಅಧಿಕಾರಿಗಳಿಗೆ ಅಲ್ಲಿ ಕೆಲಸ ಮಾಡಲು ಬಿಡುವುದೇ ಇಲ್ಲ, ಹಾಸನ ಡಿಸಿ ಸತ್ಯಭಾಮ ಮತ್ತು ನಾನು ಇಲ್ಲದಿದ್ದರೆ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರೀನ್ ತಾಜ್, ಪುರಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ್, ಸದಸ್ಯರಾದ ಅಲೀಂ, ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಮಂಜುನಾಥ್ ಆಚಾರ್, ನಾಗಲತಾ ಲೋಕೇಶ್, ಶೋಭಾರಾಣಿ, ಶ್ರೀಧರ್, ಮುಖಂಡರಾದ ತುಂಗೋಟಿ ರಾಮಣ್ಣ ಸುವರ್ಣಮ್ಮ, ಎಂ.ಜಿ.ಉಮೇಶ್, ಆನಂದ ಕೃಷ್ಣ, ಆನಂದ್, ಎಸ್.ಬಿ.ಟಿ.ರಾಮು, ತಾಪಂ ಇಓ ಲಕ್ಷ್ಮಣ್, ಯೋಜನಾಧಿಕಾರಿ ಮಧುಸೂದನ್, ಸಿಡಿಪಿಓ ಕಮಲಾ, ವಲಯ ಅರಣ್ಯಾಧಿಕಾರಿ ಸುರೇಶ್, ಮುಖ್ಯಾಧಿಕಾರಿ ಸುರೇಶ್ ಇತರರಿದ್ದರು.
Comments are closed.