ತುಮಕೂರು ದಸರಾ ವೈಭವ ಕಣ್ತುಂಬಿಕೊಳ್ಳಿ: ಡೀಸಿ

21

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅಕ್ಟೋಬರ್ 11ಮತ್ತು 12ರಂದು ತುಮಕೂರು ದಸರಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯ ಜನತೆ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ತುಮಕೂರು ದಸರಾ ವೈಭವ ಕಣ್ತುಂಬಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ ನೀಡಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ದೇವಿ ನಿತ್ಯಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ ನಂತರ ಮಾತನಾಡಿ, ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ತುಮಕೂರಿನಲ್ಲಿಯೂ ದಸರಾ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವಕ್ಕೆ ಜಿಲ್ಲೆಯ ಕಲಾಸಕ್ತರು, ಸಾಹಿತಿಗಳು, ಕ್ರೀಡಾಪಟುಗಳು, ಲೇಖಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕ್ಷಿಯಾಗಬೇಕೆಂದರು.

ದಸರಾ ಉತ್ಸವದ 9ನೇ ದಿನವಾದ ಅಕ್ಟೋಬರ್ 11 ರಂದು ಜಿಲ್ಲೆಯ ಜನರ ಮನಸ್ಸನ್ನು ರಂಜಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದು, ಖ್ಯಾತ ಗಾಯಕ ಗುರು ಕಿರಣ್ ಮತ್ತು ಕಂಬದ ರಂಗಯ್ಯ ಅವರ ತಂಡಗಳಿಂದ ಸಂಗೀತ ರಸಸಂಜೆ, ಮಿನಿ ಮ್ಯಾರಥಾನ್, ಕುಸ್ತಿ, ಆಕರ್ಷಕ ಲೇಸರ್ ಶೋ ಕಾರ್ಯಕ್ರಮವಲ್ಲದೆ, ಅ.12 ರಂದು ಮಧ್ಯಾಹ್ನ ಬಾಲಗಂಗಾಧರ ನಾಥ ಸ್ವಾಮೀಜಿ ವೃತ್ತದಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ, ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಆನೆ ಎಲ್ಲರ ಗಮನ ಸೆಳೆಯಲಿದೆ, ಜಂಬೂಸವಾರಿ ಮೆರವಣಿಗೆಯಲ್ಲಿ ಪೊಲೀಸ್ ಇಲಾಖೆಯ ಅಶ್ವದಳ, ಜಾನಪದ ಕಲಾ ತಂಡಗಳು, ವಿಂಟೇಜ್ ಕಾರ್ ಗಳು, ಪೊಲೀಸ್ ಹಾಗೂ ಎನ್ಸಿಸಿ ಬ್ಯಾಂಡ್, ಹಳ್ಳಿಕಾರ್ ಎತ್ತುಗಳು ಸೇರಿದಂತೆ ಅಲಂಕೃತಗೊಂಡ ಟ್ರ್ಯಾಕ್ಟರ್ ನಲ್ಲಿ ಜಿಲ್ಲೆಯ 70 ದೇವರು ಇರಲಿವೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!