ನಾಟಿ ಕೋಳಿ ಮರಿಗಳ ವಿತರಣೆ

292

Get real time updates directly on you device, subscribe now.

ಹುಳಿಯಾರು: ಹುಳಿಯಾರಿನಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ತಲಾ 10 ಗಿರಿರಾಜ ಕೋಳಿಮರಿಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯರ ಸಿದ್ದರಾಮಯ್ಯ ಅವರು ಫಲಾನುಭವಿಗಳಿಗೆ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿ ಒಂದು ಕೋಳಿಯು ವರ್ಷಕ್ಕೆ ಸರಾಸರಿ 130 ರಿಂದ 150 ಮೊಟ್ಟೆಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದ್ದು 3 ರಿಂದ 4 ತಿಂಗಳ ವಯಸ್ಸಿನಲ್ಲಿ ಸುಮಾರು 6 ಕೆ.ಜಿಯಷ್ಟು ತೂಕವನ್ನು ಹೊಂದುತ್ತದೆ. ಇತರೇ ಕೋಳಿಗಳಿಗಿಂತ ರೋಗ ನಿರೋಧಕ ಶಕ್ತಿಯು ಇದರಲ್ಲಿ ಹೆಚ್ಚಾಗಿದ್ದು, ಗ್ರಾಮೀಣ ಜನರು ಹಿತ್ತಲ ಕೋಳಿಗಳಾಗಿ ಇವುಗಳನ್ನು ಅತೀ ಕಡಿಮೆ ಖರ್ಚಿನಲ್ಲಿ ಸಾಕುವುದರಿಂದ ತುಂಬಾ ಲಾಭದಾಯಕ ಉಪಕಸುಬಾಗಿ ಪರಿವರ್ತಿಸಿಕೊಳ್ಳಬಹುದು ಎಂದರು.
ಒಂದು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ 70 ರಿಂದ 80 ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ಯಳನಾಡು, ದೊಡ್ಡಬಿದರೆ, ಹುಳಿಯಾರು ಭಾಗದಲ್ಲಿ ಇಲ್ಲಿಯವರೆವಿಗೆ ವಿತರಿಸಲಾಗಿತ್ತು. ಈಗ ಬೈರಾಪುರ, ಸೀಗೆಬಾಗಿ, ತೊರೆಮನೆಗಳ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ, ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಉಚಿತ, ಜನರಲ್ ಫಲಾನುಭವಿಗಳಿಗೆ ಒಂದು ಮರಿಗೆ 10 ರೂ.ನಂತೆ 10 ಮರಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಹುಳಿಯಾರಿನ ಪಶುವೈದ್ಯರಾದ ಎಚ್.ಟಿ.ಮಂಜುನಾಥ್, ಗ್ರಾಪಂ ಸದಸ್ಯ ಗಂಗಾಧರ್, ಓಬಿಸಿ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪಶು ಆಸ್ಪತ್ರೆಯ ಮಹೇಶ್, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!