ಹೊಸ ಜಂಪಿಂಗ್ ಸ್ಪೈಡರ್ ಪತ್ತೆ

ಜಯಮಂಗಲಿ ಉಗಮ ಸ್ಥಾನದಲ್ಲಿ ಕಾಣಿಸಿಕೊಂಡ ಜೇಡ

21

Get real time updates directly on you device, subscribe now.


ತುಮಕೂರು: ದೇವರಾಯನ ದುರ್ಗದ ಜಯಮಂಗಲಿ ಉಗಮ ಸ್ಥಾನದಲ್ಲಿ ಹೊಸ ಜೇಡ ಪತ್ತೆಮಾಡಲಾಗಿದ್ದು ಅದಕ್ಕೆ ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ.
ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಜಯಮಂಗಲಿ ಉಗಮ ಸ್ಥಾನ ಪ್ರದೇಶದಲ್ಲಿ ಜೇಡರ ಹುಳು ತಜ್ಞ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ಜಿ.ನಿಶಾ, ಚಿನ್ಮಯ್ ಸಿ.ಮಲಿಯೆ, ಡಬ್ಲ್ಯುಡಬ್ಲ್ಯುಇ ಸಂಸ್ಥೆಯ ಲೋಹಿತ್ ವೈ.ಟಿ. ಅವರು ಗಿಡಮರಗಳಿಂದ ಬಿದ್ದ ಒಣ ತರಗೆಲೆಗಳಲ್ಲಿ ಜಂಪಿಂಗ್ ಸ್ಪೈಡರ್ ಗುಂಪಿನ ಈ ಜೇಡರ ಹುಳುಗಳ ಆವಾಸ, ವರ್ತನೆಯ ವೈಜ್ಞಾನಿಕ ಅಧ್ಯಯನ ಕೈಗೋಡಿದ್ದರು.

ಇತರೆ ಜೇಡರ ಹುಳುಗಳಿಗಿಂತ ಭಿನ್ನವಾಗಿರುವುದರಿಂದ ಈ ಜೇಡ ಹೆಣ್ಣು ಮತ್ತು ಗಂಡು ಮಾದರಿಗಳನ್ನು ವಂಶವಾಹಿ ಡಿ ಎನ್ ಎ ಹಾಗೂ ಅಣು ಮಟ್ಟದ ಅಧ್ಯನಕ್ಕಾಗಿ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇಘ ಕುಂಟೆ ಹಾಗೂ ಕೆನಡಾದ ವೈನೆ ಮ್ಯಾಡಿಸನ್ ವಿಜ್ಞಾನಿಗಳಿಗೆ ಕಳುಹಿಸಲಾಗಿತ್ತು.
ಬೇರೆ ಜೇಡಗಳ ಜೊತೆ ಈ ಜೇಡದ ಡಿಎನ್ ಎ ಮ್ಯಾಪಿಂಗ್ ಮಾಡಿದಾಗ ಸಂಪೂರ್ಣ ಭಿನ್ನವಾಗಿರುವ ಅಣು ಸಂಯೋಜನೆ ಕಂಡು ಬಂದಿರುವುದರಿಂದ ಇದನ್ನು ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ, ಹೊಸ ಜಾತಿಗೆ ತೆಂಕಣ (ದಕ್ಷಿಣ ಏಷ್ಯಾ) ಎಂತಲೂ ಮತ್ತು ಪ್ರಭೇದ ಜಯಮಂಗಲಿ ( ಜಯಮಂಗಲಿ ಉಗಮ ಸ್ಥಾನ) ಎಂದು ಹೆಸರಿಸಲಾಗಿದೆ, ಇಂತಹ ವಿಭಿನ್ನ ಲಕ್ಷಣದ ನಿಖರ ಮಾಹಿತಿಯ ಸಂಶೋಧನಾ ಬರಹ ಅಂತಾರಾಷ್ಟ್ರೀಯ ಜರ್ನಲ್ ಝೂಕೀಸ್ ನಿಯತ ಕಾಲಿಕೆಯಲ್ಲಿ ಅಕ್ಟೋಬರ್ 11 ರ 2024 ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಬೆಂಗಳೂರಿನ ಜೀವ ವಿಜ್ಞಾನ ಕೇಂದ್ರ (ಎನ್ ಸಿಬಿಎಸ್) ಮತ್ತು ಯೂನಿವರ್ಸಿಟ್ ಒಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಸಹಯೋಗದಲ್ಲಿ ಈ ಸಂಶೋಧನೆ ಮಾಡಿದ್ದಾರೆ.

ಜೇಡಗಳು ಪರಿಸರ ಸಮತೋಲನೆಯಲ್ಲಿ, ಆಹಾರ ಜಾಲ ಹಾಗೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಜೀವಿಗಳು ಬೇಸಿಗೆಯಲ್ಲಿ ಬೀಳುವ ಕಾಡಿನ ಬೆಂಕಿಯಿಂದ ನೆಲ ಮಟ್ಟದಲ್ಲಿರುವ ಇಂತಹ ಹಲವು ಜೀವಿಗಳು ಹೊಸ ಪ್ರಪಂಚಕ್ಕೆ ಗೊತ್ತಾಗುವ ಮುನ್ನವೆ ವಿನಾಶ ಹೊಂದುತ್ತವೆ.
ಪ್ರಪಂಚದಲ್ಲಿ ಸುಮಾರು 51929 ಪ್ರಭೇದಗಳಿದ್ದರೆ, ನಮ್ಮ ದೇಶದಲ್ಲಿ 1971 ಪ್ರಭೇದಗಳಿವೆ, ತುಮಕೂರು ಜಿಲ್ಲೆಯಲ್ಲಿ ಸುಮಾರು 250 ಕ್ಕು ಹೆಚ್ಚು ಪ್ರಭೇದಗಳನ್ನು ಪತ್ತೆ ಹಚ್ಚಲಾಗಿದೆ.

Get real time updates directly on you device, subscribe now.

Comments are closed.

error: Content is protected !!