ನಮ್ಮ ನಾಯಕನೆ ಶ್ರೇಷ್ಠ ಸ್ಟೇಟಸ್

ಎರಡು ವರ್ಗದ ನಡುಗೆ ಪ್ರತಿಷ್ಠೆ- ಠಾಣೆ ಮೆಟ್ಟಿಲೇರಿದ ಪ್ರಕರಣ

21

Get real time updates directly on you device, subscribe now.


ಕುಣಿಗಲ್: ಎರಡು ವರ್ಗದವರು ತಮ್ಮ ನಾಯಕನೆ ಶ್ರೇಷ್ಠ ಎಂಬಂತೆ ಬಿಂಬಿಸಿಕೊಂಡು ಹಾಕಿದ ವಾಟ್ಸಪ್ ಸ್ಟೇಟಸ್, ಪ್ರತಿಷ್ಠೆಯಾಗಿ ಮಾರ್ಪಾಟಾಗಿ ಠಾಣೆ ಮೆಟ್ಟಿಲೇರಿ ಎರಡು ವರ್ಗದ ಜನರು ಅಮೃತೂರು ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ಕೆಲಕಾಲ ಗೊಂದಲದ ವಾತಾವರಣ ಉಂಟಾದ ಘಟನೆ ಸೋಮವಾರ ನಡೆದಿದೆ.

ತಾಲೂಕಿನ ಅಮೃತೂರಿನಲ್ಲಿ ಕೆಲ ದಿನಗಳ ಹಿಂದೆ ಉತ್ಸವದ ಸಮಯದಲ್ಲಿ ದಲಿತ ವರ್ಗಕ್ಕೆ ಸೇರಿದವರು ಡಾ.ಅಂಬೇಡ್ಕರ್ ಉತ್ಸವ ಸೇರಿದಂತೆ ಪಟ ಕುಣಿತದಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರ ಅಳವಡಿಸಿ ಉತ್ಸವ ಮಾಡಿದ್ದು ಇದನ್ನು ದಲಿತ ವರ್ಗದ ಯುವಕರು ಕೆಲ ಹಿನ್ನೆಲೆ ಸಂಗೀತ ಅಳವಡಿಸಿಕೊಂಡು ಉತ್ಸವದ ವೀಡಿಯೋಗಳನ್ನು ಸ್ಟೇಟಸ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಾಯಕರೇ ಶ್ರೇಷ್ಠ ಎಂಬಂತೆ ಬಿಂಬಿಸಿದ್ದರು.

ಸವರ್ಣೀಯ ಜನಾಂಗದ ಯುವಕರು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗೂ ಉತ್ಸವದಲ್ಲಿ ನಾಡಪ್ರಭುವಿನ ಮೆರವಣಿಗೆ ನಡೆಸಿದ ವೀಡಿಯೋ ತುಣುಕಿಗೆ ಚಲನಚಿತ್ರ ಸಂಗೀತದ ಹಿನ್ನೆಲೆ ಅಳವಡಿಸಿ ತಮ್ಮ ನಾಯಕನೆ ಶ್ರೇಷ್ಠ ಎಂಬಂತೆ ವೀಡಿಯೋ ತುಣುಕು ಹರಿಯಬಿಟ್ಟಿದ್ದರು, ಈ ಮಧ್ಯೆ ಕೆಲದಿನದ ಹಿಂದೆ ಎರಡೂ ಬಣದವರು ಪ್ರತಿಷ್ಠೆಯಾಗಿ ಸ್ವೀಕರಿಸಿ ತಮ್ಮ ನಾಯಕರೆ ಶ್ರೇಷ್ಠ ಎಂಬಂತೆ ವಿಷಯ ಪ್ರಸ್ತಾಪಕ್ಕೆ ಮುಂದಾಗಿ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗಿದೆ, ಈ ಹಿನ್ನೆಲೆಯಲ್ಲಿ ದಲಿತರು ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ವಿಚಾರಣೆಗೆ ಸವರ್ಣೀಯರನ್ನು ಕರೆ ತಂದಾಗ ಕೆಲ ಮುಖಂಡರು ಆಕ್ಷೇಪಿಸಿ ಠಾಣೆ ಮುಂದೆ ಜಮಾವಣೆಗೊಂಡಿದ್ದು ಇದಕ್ಕೆ ಪ್ರತಿಯಾಗಿ ದಲಿತ ಮುಖಂಡರೂ ಠಾಣೆ ಮುಂದೆ ಜಮಾವಣೆಗೊಂಡು ಪರಸ್ಪರ ವಾಗ್ವಾದಕ್ಕೆ ಇಳಿದರು, ಠಾಣೆಯ ಮುಂದೆಯೆ ಎರಡೂ ವರ್ಗದವರು ವಾಗ್ವಾದಕ್ಕೆ ಇಳಿದ್ದು ಪರಿಸ್ಥಿತಿ ನಿಯಂತ್ರಿಸಲು ಪಿಎಸೈ ಶಮಂತಗೌಡ ಸಿಬ್ಬಂದಿ ಮುಂದಾಗಿ ಎರಡೂ ಕಡೆಯುವರನ್ನು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿ ಹೇಳಲು ಹೈರಾಣಾದರು. ವಿಷಯ ತಿಳಿದ ಸಿಪಿಐ ಮಾದ್ಯಾನಾಯಕ್ ಸ್ಥಳಕ್ಕೆ ಭೇಟಿ ನೀಡಿ ಎರಡೂ ಕಡೆಯ ಮುಖಂಡರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!