ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗದ ಪ್ರಸಿದ್ದ ದೇವಾಲಯ ಹೇಮಗಿರಿ ವರದರಾಜ ಸ್ವಾಮಿ ದೇವಾಲಯದ ಹುಂಡಿಯನ್ನು ದುಷ್ಕರ್ಮಿಗಳು ಹೊಡೆದು ಲಕ್ಷಾಂತರ ರೂ. ಕಳವು ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ದೇವಾಲಯದ ಅರವಣದಲ್ಲಿ ಇಡಲಾಗಿದ್ದು ಮೂರು ಹುಂಡಿಗಳನ್ನು ದುಷ್ಕರ್ಮಿಗಳು ಕಳುವು ಮಾಡಿ ಅನತಿ ದೂರದಲ್ಲಿ ಹೊಡೆದು ಹಾಕಿ, ಹುಂಡಿಯಲ್ಲಿದ್ದ ಹಣ ಇತರೆ ವಸ್ತುಗಳನ್ನು ದೋಚಿದ್ದಾರೆ, ದೇವಸ್ಥಾನದಲ್ಲಿದ್ದ ಇನ್ನೊಂದು ಹುಂಡಿ ಕಳುವಿಗೆ ವಿಫಲ ಯತ್ನ ನಡೆಸಿದ್ದಾರೆ, ಘಟನೆ ಸಂಬಂಧಿಸಿದಂತೆ ಭಕ್ತಾದಿಗಳು ಮಂಗಳವಾರ ಬೆಳಗ್ಗೆ ನೋಡಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಉಪ ತಹಶೀಲ್ದಾರ್ ರುದ್ರಾಣಮ್ಮ ಅಂದಾಜು ಒಂದು ಲಕ್ಷ ರೂ. ಕಳುವಾಗಿದೆ ಎಂದು ಹುಲಿಯೂರು ದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೆ ಹೋಬಳಿಯ ಉಜ್ಜಿನಿ ಚೌಡೇಶ್ವರಿ ದೇವಾಲಯದ ಹುಂಡಿ ಕಳವು ಪ್ರಕರಣ ನಡೆದು ಹದಿನೈದು ದಿನದೊಳಗೆ ವರದರಾಜ ಸ್ವಾಮಿ ದೇವಾಲಯದ ಹುಂಡಿ ಕಳುವು ಮಾಡಲಾಗಿದೆ, ಘಟನೆಗೆ ಸಂಬಂಧಿಸಿದಂತೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಭಕ್ತಾದಿಗಳು, ಪೊಲೀಸರು ಉಜ್ಜಿನಿ ದೇವಾಲಯದ ಹುಂಡಿ ಕಳವು ಪ್ರಕರಣವಾಗುತ್ತಲೆ ಎಲ್ಲಾ ಮುಜರಾಯಿ ದೇವಾಲಯದ ಹುಂಡಿ ಏಣಿಕೆ ಮಾಡುವಂತೆ ಸೂಚನೆ ನೀಡಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದಲೆ ವರದರಾಜು ಸ್ವಾಮಿ ದೇವಾಲಯದ ಹುಂಡಿ ಹಣ ಕಳುವಾಗಿದೆ, ಈ ನಿಟ್ಟಿನಲ್ಲಿ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
Comments are closed.