ಗುಬ್ಬಿ: ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷದಿಂದ ಇಡೀಗ್ರಾಮ ಪಂಚಾಯಿತಿ ಅಭಿವೃದ್ಧಿಯೇ ಮರೀಚಿಕೆಯಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದರು.
ತಾಲ್ಲೂಕಿನ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಅಭಿವೃದ್ಧಿ ಅಧಿಕಾರಿಯನ್ನು ಬದಲಾವಣೆ ಮಾಡುವವರೆಗೂ ಗ್ರಾಮ ಪಂಚಾಯಿತಿಯ ಬೀಗವನ್ನು ತೆಗೆಯುವುದಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು ನಾವು ಆಯ್ಕೆ ಆಗಿ 4 ತಿಂಗಳು ಕಳೆದಿದ್ದರೂ ಸಹ ಇದುವರೆಗೂ ಒಂದೇ 1 ಸದಸ್ಯರ ಸಭೆಯನ್ನು ನಡೆಸದೆ ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿತನ ಮಾಡುತ್ತಿದ್ದಾರೆ, ಕುಡಿಯುವ ನೀರು ಬೀದಿ ದೀಪ ಮತ್ತು ಕರೋನಾದಂತಹ ಕಷ್ಟಕರ ಸಮಯದಲ್ಲಿ ಅಧಿಕಾರಿ ಪಂಚಾಯಿತಿಗೆ ಬಾರದೇ ಇರುವುದರಿಂದ ಗ್ರಾಮದ ಜನರು ಸಂಕಷ್ಟದ ಹಾದಿಯಲ್ಲಿದ್ದರೂ ಕೂಡ ಇವರು ಸ್ಪಂದಿಸುತ್ತಿಲ್ಲ, ಇಲ್ಲಿಂದ ಅಭಿವೃದ್ಧಿ ಅಧಿಕಾರಿ ಬದಲಾವಣೆಯಾಗುವವರೆಗೂ ಬೀಗ ತೆಗೆಯುವುದಿಲ್ಲ ಎಂದು ಪ್ರತಿಭಟಿಸಿದರು.
ಗ್ರಾಮ ಪಂಚಾಯತಿಯ ಹೊಸ ಕಟ್ಟಡ ನಿರ್ಮಾಣವಾಗಿ 7ವರ್ಷಗಳು ಕಳೆದಿದ್ದರೂ ಸಹ ಇದುವರೆಗೂ ಅದನ್ನು ಉದ್ಘಾಟಿಸುವ ಗೋಜಿಗೆ ಹೋಗಿಲ್ಲ, 4 ವರ್ಷದ ಹಿಂದೆ ಶೌಚಾಲಯ ನಿರ್ಮಾಣಕ್ಕೆ ಕೈ ಹಾಕಿದರು ಕೂಡ ಅದನ್ನು ಪರಿಪೂರ್ಣ ಬೇಜವಾಬ್ದಾರಿತನ ತೋರಿಸಿದ್ದಾರೆ ಇಪ್ಪತ್ತು ಸದಸ್ಯರು ಇದ್ದು ಅದರಲ್ಲಿ ಹತ್ತು ಜನ ಮಹಿಳಾ ಸದಸ್ಯರಿದ್ದರೂ ಕೂಡ ಅವರು ಶೌಚಕ್ಕೆ ಬಯಲಿಗೆ ಹೋಗುವಂತಹ ಹೋಗುವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ನಮ್ಮಲ್ಲಿಯೇ ಶೌಚಾಲಯ ಇಲ್ಲ ಎಂದರೆ ಬೇರೆಯವರಿಗೆ ನಾವು ಹೇಳಲು ಸಾಧ್ಯ ಎಂದು ಮಮತಾ ಬೇಗ ಬೇಸರ ವ್ಯಕ್ತಪಡಿಸಿದರು.
ಎಲ್ಲಾ ಭಾಗದಲ್ಲಿಯೂ ಕೂಡ ಎನ್ ಆರ್ ಇ ಜಿ ಲಸವನ್ನು ಮಾಡಲು ಮುಂದಿದ್ದಾರೆ ಆದರೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅಂತಹ ಯಾವುದೇ ಕೆಲಸಗಳು ನಡೆದಿಲ್ಲ ಈ ಅಧಿಕಾರಿ ಇಲ್ಲಿಂದ ಬದಲಾವಣೆಯಾಗುವವರೆಗೂ ಕೂಡ ನಾವು ಯಾವುದೇ ಕಾರಣಕ್ಕೂ ಬೀಗ ತೆಗೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷ ದಿನೇಶ್, ಸದಸ್ಯರಾದ ರಮೇಶ್, ಶ್ರೀನಿವಾಸ್, ಯತೀಶ್, ಭದ್ರಣ್ಣ, ಮುದ್ದಣ್ಣ, ಪ್ರೇಮಾ, ದೇವರಾಜು, ಮಮತಾಜ್ ಬೇಗಮ್, ಶಿವನಂಜಪ್ಪ, ಲೀಲಾ ನಟರಾಜು, ಪ್ರೇಮಲತಾ ದಿನೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
Comments are closed.