ಮಸ್ತ್ ಮಸ್ತ್ ತುಮಕೂರು ದಸರಾ ಉತ್ಸವ

ಗೃಹ ಮಂತ್ರಿ ಪರಂ ಕಾಳಜಿ- ಡೀಸಿ, ಸಿಇಒ ಸಾರಥ್ಯ- ಎಲ್ಲಾ ಅಧಿಕಾರಿಗಳಿಂದ ಸಾಥ್

3

Get real time updates directly on you device, subscribe now.


ತುಮಕೂರು: ಮೈಸೂರು ದಸರ ಎಷ್ಟೊಂದು ಸುಂದರ ಎಂಬ ಮಾತಿದೆ, ಈ ಮಾತಿಗೆ ತಕ್ಕಂತೆ ಮೈಸೂರು ದಸರಾ ನಿಜಕ್ಕೂ ಅದ್ಭುತ, ಅಮೋಘ, ಅನನ್ಯ, ಅರಮನೆ ಆವರಣದಲ್ಲಿ ನಡೆಯುವ ಜಗದ್ವಿಖ್ಯಾತ ಜಂಬು ಸವಾರಿಯಂತೂ ನಿಜಕ್ಕೂ ರೋಚಕ, ಅಲ್ಲಿನ ವೈಭವ ಕಣ್ತುಂಬಿಕೊಳ್ಳೋದೆ ರೋಮಾಂಚನ, ದಸರಾ ಎಂದರೆ ಇಡೀ ಮೈಸೂರು ಜಗಮಗಿಸುತ್ತೆ.

ಇದೇ ಮಾದರಿಯಲ್ಲಿ ತುಮಕೂರು ದಸರ ಬಹಳ ಅದ್ಭುತ ವಾಗಿ ನಡೆಯುವ ಮೂಲಕ ಐತಿಹಾಸಿಕ ದಾಖಲೆ ಸೃಷ್ಟಿಸಿತು, ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ನಡೆದ ದಸರಾ ಉತ್ಸವ ಬಹಳ ಅದ್ದೂರಿಯಾಗಿ ಅಚ್ಚುಕಟ್ಟಾಗಿ ನಡೆಸಲಾಯಿತು, ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಜಿ.ಪರಮೇಶ್ವರ ಅವರ ಆಸಕ್ತಿ ಹಾಗೂ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು ಅವರ ಸಾರಥ್ಯದಲ್ಲಿ, ಎಸ್ ಪಿ ಅಶೋಕ್ ಹಾಗೂ ಪಾಲಿಕೆ ಕಮಿಷನರ್ ಅಶ್ವಿಜ ಅವರ ಸಹಕಾರ ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳ ಶ್ರಮದಿಂದ ತುಮಕೂರು ದಸರಾ ಬಹಳ ಅದ್ದೂರಿಯಾಗಿ ನೆರವೇರಿದ್ದು ವಿಶೇಷ.
ಒಂಬತ್ತು ದಿನ ನಡೆದ ದಸರ ಉತ್ಸವದಲ್ಲಿ ಪ್ರತಿದಿನ ಹೋಮ, ಹವನ, ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಪುನಸ್ಕಾರ ನಡೆಸುವ ಮೂಲಕ ಜಿಲ್ಲೆಯ ಜನರ ಒಳಿತಿಗೆ ಪ್ರಾರ್ಥಿಸಲಾಯಿತು.

ಒಟ್ಟಾರೆ ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಡಳಿತದ ಮುತುವರ್ಜಿಯಿಂದ ತುಮಕೂರು ದಸರ ಯಶಸ್ವಿಯಾಗಿ ನಡೆದಿದೆ, ಮುಂದಿನ ವರ್ಷ ಇದೇ ರೀತಿ ಅದ್ದೂರಿಯಾಗಿ ನಡೆಸುವ ಚಿಂತನೆ ಸಚಿವ ಡಾ.ಜಿ.ಪರಮೇಶ್ವರ್ ಅವರದ್ದು, ಸ್ವತಹ ಈ ಮಾತನ್ನು ಅವರೇ ಹೇಳಿದ್ದಾರೆ, ಯಾವುದೇ ವಿಘ್ನ, ಅಡೆತಡೆಗಳು ಎದುರಾಗಗಿದ್ದರೆ ಮುಂದಿನ ವರ್ಷಗಳಲ್ಲಿ ತುಮಕೂರು ದಸರಾ ಅದ್ದೂರಿಯಾಗಿ ನಡೆಯುವುದರಲ್ಲಿ ಅನುಮಾನವಿಲ್ಲ.

Get real time updates directly on you device, subscribe now.

Comments are closed.

error: Content is protected !!