ಮಹರ್ಷಿ ವಾಲ್ಮೀಕಿ ಪುತ್ಥಳಿಯ ಹೈಡ್ರಾಮ

ಕ್ಷಣಾರ್ಧದಲ್ಲೇ ಪುತ್ಥಳಿ ತೆರವು ಕಾರ್ಯಾಚರಣೆ

21

Get real time updates directly on you device, subscribe now.


ಕೊರಟಗೆರೆ: ಪಪಂ ಸರ್ಕಲ್ ನಲ್ಲಿ ರಾತ್ರೋರಾತ್ರಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತ್ಯಕ್ಷ, ಪಪಂ ಮುಖ್ಯಾಧಿಕಾರಿ ನೇತೃತ್ವದಲ್ಲಿ ಕ್ಷಣಾರ್ಧದಲ್ಲೇ ಪುತ್ಥಳಿ ತೆರವು ಕಾರ್ಯಾಚರಣೆ, ತೆರವು ಮಾಡಿದ ಮರುಕ್ಷಣವೇ ರಸ್ತೆಗಿಳಿದು ವಾಲ್ಮೀಕಿ ಸಮಾಜದ ಮುಖಂಡರಿಂದ ರಾತ್ರಿಯಿಡಿ ಪ್ರತಿಭಟನೆ, ವಾಲ್ಮೀಕಿ ವೃತ್ತದ ನಾಮಫಲಕ ಮತ್ತು ಪೂಜೆಗೆ ಅವಕಾಶ ನೀಡಿದ ಕೊರಟಗೆರೆ ತಾಲೂಕು ಆಡಳಿತ, ಪುತ್ಥಳಿ ಮೆರವಣಿಗೆ ಸಾಗಿದ ಮರುಕ್ಷಣವೇ ಪೊಲೀಸರಿಂದ ನಾಮಫಲಕ ತೆರವು ಕಾರ್ಯಾಚರಣೆಯ ಹೈಡ್ರಾಮ ಗುರುವಾರ ನಡೆದಿದೆ.

ಕೊರಟಗೆರೆ ಪಟ್ಟಣದ ಪಪಂ ಮುಂಭಾಗದ ಸರ್ಕಲ್ ನಲ್ಲಿ ಅ.16ರ ಬುಧವಾರ ತಡರಾತ್ರಿ 11.15ಕ್ಕೆ ಮಹರ್ಷಿ ವಾಲ್ಮೀಕಿಯ ಪ್ರತಿಮೆ ದಿಡೀರ್ ಪ್ರತ್ಯಕ್ಷವಾಗಿದೆ, ಮರುಕ್ಷಣವೇ ಪೊಲೀಸ್, ಕಂದಾಯ ಮತ್ತು ಪಪಂ ಅಧಿಕಾರಿವರ್ಗ ಎಚ್ಚೆತ್ತುಕೊಂಡು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿ 11.45ಕ್ಕೆ ಪ್ರತಿಮೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ, ತೆರವು ಕಾರ್ಯಚರಣೆ ನಡೆಸಿದ ತಕ್ಷಣವೇ ವಾಲ್ಮೀಕಿ ಸಮಾಜದ ಮುಖಂಡರು ವಾಲ್ಮೀಕಿ ಪ್ರತಿಮೆಯನ್ನೇ ಇದ್ದಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ಮುಖಂಡರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ತುಮಕೂರು ಎಸ್ಪಿ ಅಶೋಕ್.ಕೆ.ವಿ. ಸೂಚನೆಯಂತೆ ಹೆಚ್ಚುವರಿ ಎಸ್ಪಿ ಮರೀಯಪ್ಪ, ಡಿವೈಎಸ್ಪಿ ಚಂದ್ರಶೇಖರ್, ರಾಮಚಂದ್ರಪ್ಪ ನೇತೃತ್ವದಲ್ಲಿ ಸುಮಾರು ಪೊಲೀಸರು ರಾತ್ರಿಯಿಡಿ ಕೊರಟಗೆರೆ ಪಟ್ಟಣದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು, ಪ್ರಸ್ತುತ ಸರ್ಕಲ್ ಸುತ್ತಲು ಬ್ಯಾರಿಕೇಟ್ ಅಳವಡಿಕೆ ಮಾಡಿ ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ.

Get real time updates directly on you device, subscribe now.

Comments are closed.

error: Content is protected !!