ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ

3

Get real time updates directly on you device, subscribe now.


ಕುಣಿಗಲ್: ಪಟ್ಟಣದ ದೊಡ್ಡಕೆರೆ ತುಂಬಿ ಕೋಡಿಯಾಗಿ ನೀರು ಹರಿದುಹೋಗುತ್ತಿದ್ದರೂ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ಪ್ರದೇಶದ ರೈತರ ಪಾಲಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ, ಶಾಸಕರು ಸುಳ್ಳು ಭರವಸೆ ನೀಡುವ ಬದಲು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಿ ಎಂದು ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್ ಆಗ್ರಹಿಸಿದರು.

ಶನಿವಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಡಾ.ರಂಗ ನಾಥ ಶಾಸಕರಾದಾಗಿನಿಂದ ದೊಡ್ಡಕೆರೆ ತುಂಬಿ ಕೋಡಿಯಾಗುತ್ತಿದೆ, ಇದಕ್ಕೆ ವರುಣನ ಕೃಪೆಯೂ ಕಾರಣದ ಜೊತೆ ಶಾಸಕರ ಶ್ರಮವೂ ಇದೆ, ಶಾಸಕರನ್ನು ಅಭಿನಂಧಿಸುತ್ತೇವೆ, ಆದರೆ ದೊಡ್ಡಕೆರೆ ನಂಬಿಕೊಂಡು ಸುಮಾರು 12-14 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಇದೆ, ಈ ಜಮೀನು ಅವಲಂಬಿಸಿಕೊಂಡು ನೂರಾರು ರೈತ ಕುಟುಂಬ ಇದೆ, ದೊಡ್ಡಕೆರೆ ತುಂಬಿ ಕೋಡಿಯಾದರೂ ಕಳೆದ ಹಲವಾರು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿಲ್ಲ, ಶಾಸಕರು ಈಬಗ್ಗೆ ಗಮನ ಹರಿಸಿಲ್ಲವೋ ಅಥವಾ ನಿರ್ಲಕ್ಷ್ಯ ವಹಿಸಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ, ಮಾಜಿ ಸಂಸದರನ್ನು ಕರೆಸಿ ಗಂಗೆಪೂಜೆ ಮಾಡಿದ್ದಾರೆ, ಇದು ಅವರ ಪಕ್ಷದ ವಿಷಯ, ಆದರೆ ದೊಡ್ಡಕೆರೆ ಅಚ್ಚುಕಟ್ಟುಪ್ರದೇಶದಲ್ಲಿನ ರೈತರಿಗೆ ನೀರು ಕೊಡದ ಶಾಸಕರ ನಡೆ ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಜೆಡಿಎಸ್ ಸದಸ್ಯರಾದ ಶ್ರೀನಿವಾಸ್, ಅನ್ಸರ್ ಪಾಶ ಇದ್ದರು.

Get real time updates directly on you device, subscribe now.

Comments are closed.

error: Content is protected !!