ತುಮಕೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಪ್ರಭು ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಇಂಜಿನಿಯರ್ ಗೆ ಸೂಚನೆ ನೀಡಿದರು.
ಜೆಜೆಎಂ ಕಾಮಗಾರಿ ಪರಿಶೀಲನೆಗಾಗಿ ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾರನಗೆರೆ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣ ಮಾಡುವ ಕಾಮಗಾರಿಗಳ ಅಂತರ್ಗತ ಪೈಪ್ ಲೈನ್ ಮತ್ತು ಗೇಟ್ ವಾಲ್ವ್ ಗಳ ಮಾಹಿತಿಯನ್ನೊಳಗೊಂಡ ವಿಲೇಜ್ ಕೀ ಮ್ಯಾಪನ್ನು ಕಾಮಗಾರಿ ಮುಗಿದ ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು, ವಿಸ್ತೃತ ಯೋಜನಾ ವರದಿಯಲ್ಲಿರುವಂತೆ ಅಂದಾಜು ಪಟ್ಟಿಯಲ್ಲಿ ನಿಗದಿಪಡಿಸಿದಂತೆ ಕಾಮಗಾರಿ ಅನುಷ್ಠಾನವಾಗಿರಬೇಕು, ಮನೆ ಮುಂದೆ ಅಳವಡಿಸುವ ನಳ ಸಂಪರ್ಕ ಸೇರಿ ಕಾಮಗಾರಿಗಳಲ್ಲಿ ಬಳಸುವ ಎಲ್ಲಾ ಸಾಮಗ್ರಿಗಳು ಗುಣಮಟ್ಟದ್ದಾಗಿರಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಹರೀಶ್, ಸಹಾಯಕ ನಿರ್ದೇಶಕ (ಗ್ರಾ.ಉ) ಕನಕಪ್ಪ ಹನುಮಪ್ಪ ಮೇಲುಸಕ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಆರ್.ನಾಗರಾಜು, ಹೆಚ್. ಆರ್.ಜುಂಜೇಗೌಡ, ತಾಂತ್ರಿಕ ಸಂಯೋಜಕ ಜಿ.ಪುನೀತ್ ಕುಮಾರ್ ಇದ್ದರು.
Comments are closed.