520 ಮಂದಿಗೆ ಸೋಂಕು: 3 ಸಾವು

442

Get real time updates directly on you device, subscribe now.

ತುಮಕೂರು: ಜಿಲ್ಲೆಯಾದ್ಯಂತ ಇಂದು 520 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 30,722 ಏರಿಕೆ ಕಂಡಿದೆ. 3,518 ಸಕ್ರಿಯ ಪ್ರಕರಣಗಳ ಪೈಕಿ 211 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 217, ಚಿನಾಹಳ್ಳಿ 14, ಗುಬ್ಬಿ 27, ಕೊರಟಗೆರೆ 17, ಕುಣಿಗಲ್ 36, ಮಧುಗಿರಿ 28, ಪಾವಗಡ 45, ಶಿರಾ 73, ತಿಪಟೂರು 47, ತುರುವೇಕೆರೆಯಲ್ಲಿ 16 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಒಟ್ಟು ಮೂವರು ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ತುಮಕೂರು ತಾಲೂಕಿನ ಸೀತಕಲ್ಲು ಗ್ರಾಮದ ವ್ಯಕ್ತಿ ವ್ಯಕ್ತಿ(30) ಮೃತಪಟ್ಟಿದ್ದಾರೆ, ಅನ್ಯ ಕಾರಣದಿಂದ ಮಧುಗಿರಿ ತಾಲೂಕಿನ ವ್ಯಕ್ತಿ (55) ಮತ್ತು ತುಮಕೂರು ನಗರದ ಎಸ್.ಎಸ್.ಪುರಂನ ಮಹಿಳೆ (76) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!