ಕುಣಿಗಲ್: ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ನಿರ್ಮಾಣದಿಂದಾಗಿ ಮಳೆ ನೀರು ಕೋಡಿ ಸರಾಗವಾಗಿ ಹರಿಯದೆ ವಿವಿಧ ಗ್ರಾಮದ ಸಾವಿರಾರು ಎಕರೆ ಪ್ರದೇಶದಲ್ಲಿ ಮಳೆ ನೀರು ನಿಂತು ರೈತರು ಪರದಾಡುವಂತಾಗಿದ್ದು ಸಮಸ್ಯೆಯಿಂದ ರೈತರ ಪಾಡು ಮಾಡುವಂತೆ ಸಂಸದ ಡಾ.ಸಿ.ಎನ್.ಮಂಜುನಾಥ್ ಗೆ ರೈತರು ಆಗ್ರಹಿಸಿದರು.
ಮಂಗಳವಾರ ಮಧ್ಯಾಹ್ನ ಸಂಸದ ಡಾ.ಸಿ.ಎನ್.ಮಂಜುನಾಥ್, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಪ್ರವೀಣ್, ಹೇಮಾವತಿ ನಾಲಾ ವಲಯದ ಇಇ ಕಿರಣ, ಎಇಇ ರವಿ, ತಹಶೀಲ್ದಾರ್ ರಶ್ಮಿ, ತಾಪಂಇಒ ನಾರಾಯಣ ಇತರರೊಂದಿಗೆ ರೈತರ ಸಮಸ್ಯೆ ಆಲಿಸಲು ಶೆಟ್ಟಿಗೆಹಳ್ಳಿ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೇಟಿ ನೀಡಿದಾಗ ಶೆಟ್ಟಿಗೆಹಳ್ಳಿಯ ರೈತ ನಾಗರಾಜ್ ಇತರರು ಶೆಟ್ಟಿಗೆಹಳ್ಳಿ ಸುತ್ತಮುತ್ತಲ ಗ್ರಾಮಗಳ ಜಮೀನುಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದೆ, ಹೆದ್ದಾರಿ ಕಾಮಗಾರಿ ನಿರ್ವಹಣೆ ಮಾಡುವಾಗ ಶೆಟ್ಟಿಗೆಹಳ್ಳಿ, ಚೊಟ್ಟನಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ನಾಲ್ಕು ಸಾವಿರ ಎಕರೆ ಪ್ರದೇಶದ ಮಳೆ ನೀರು ಹಾಗೂ ಜಮೀನಿನ ಮೇಲುಭಾಗದ ಚನ್ನಾಪುರ, ಬೇಗೂರು, ಕಿತ್ತನಾಗಮಂಗಲ ಕೆರೆ ಸೇರಿದಂತೆ ಮೂವತ್ತಕ್ಕು ಹೆಚ್ಚು ಕಟ್ಟೆಗಳ ಕೋಡಿ ನೀರು ಹರಿದು ಬರುವುದರಿಂದ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಿಲ್ಲದ ಕಾರಣ ಕೆರೆ ನೀರು ಜಮೀನಿನಲ್ಲಿ ನಿಂತು ಬೆಳೆ ನಷ್ಟವಾಗುತ್ತಿದೆ, ಸಮಸ್ಯೆ ಬಹಳಷ್ಟು ದಿನದಿಂದ ಇದೆ, ಪರಿಹಾರ ಮಾಡುವಂತೆ ಒತ್ತಾಯಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ಬೈಪಾಸ್ ಹೆದ್ದಾರಿಯ ಸರ್ವೀಸ್ ರೋಡ್ ಪೂರ್ತಾ ಹಾಳಾಗಿದೆ, ಕಗ್ಗೆರೆಗೆ ಹೋಗಲು ಆಲಪ್ಪನಗುಡ್ಡೆ ಸಮೀಪ ರಸ್ತೆ ಬಂದ್ ಮಾಡಲಾಗಿದೆ, ಯಡಿಯೂರು ಸಮೀಪದ ಚಾಕೇನಹಳ್ಳಿ ಡೈರಿ ಬಳಿ ಸ್ಕೈವಾಕ್ ನಿರ್ಮಿಸುವಂತೆ ಮನವಿ ನೀಡಿದ್ದು, ಯಡಿಯೂರು ಗ್ರಾಪಂ ಮಾಜಿ ಅಧ್ಯಕ್ಷ ದೀಪು, ಯಡಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸೂಕ್ತ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲು ಮನವಿ ನೀಡಿದರು, ಪುರಸಭೆ ಮಾಜಿ ಸದಸ್ಯ ಮಂಜು, ಚಿಕ್ಕಕೆರೆ ಬಳಿ ರೈಲು ಸೇತುವೆ ಸಮೀಪ ರೈತರ ಜಮೀನಿಗೆ ಪರಿಹಾರ ನೀಡಿಲ್ಲ, ಪರಿಹಾರ ಕೊಡಿಸಲು ಮನವಿ ನೀಡಿದರು.
ರೈಲ್ವೆ ಇಲಾಖೆಯಿಂದ ಬಾಕಿ ಇರುವ ಪರಿಹಾರ ಧನ ವಿತರಣೆ ನಿಟ್ಟಿನಲ್ಲಿ ರೈಲ್ವೆ ಸಚಿವರ ಗಮನ ಸೆಳೆಯಲಾಗುವುದು ಎಂದರು. ಮುಖಂಡರಾದ ಹರೀಶ್, ಹೇರೂರು ಶಂಕರ, ಪ್ರಕಾಶ್, ನಾಗರಾಜ್, ಇತರರು ಇದ್ದರು.
Comments are closed.