ಕೊರಟಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಗುಂಡಿಗಳದ್ದೇ ಕಾರುಬಾರು, ಬೈರೇನಹಳ್ಳಿಯಿಂದ ಕೊರಟಗೆರೆ ಸಂಪರ್ಕದ ಪಿಡಬ್ಲ್ಯೂಡಿ ಮುಖ್ಯ ರಸ್ತೆಯಲ್ಲಿ 100ಕ್ಕೂ ಅಧಿಕ ಗುಂಡಿಗಳು ಇವೆ, ಈ ರಸ್ತೆಯಲ್ಲಿ ಪ್ರತಿನಿತ್ಯವು ಅಪಘಾತ ಆಗ್ತಿದ್ರು ಸಹ ಪಿಡಬ್ಲ್ಯೂಡಿ ಇಲಾಖೆ ಮಾತ್ರ ಗ್ರಾಮೀಣ ಪ್ರದೇಶದ ಕಡೆಗಳಿಗೆ ತಿರುಗಿಯೂ ನೋಡಿಲ್ಲ, ಬೇಸತ್ತಾ ಸ್ಥಳೀಯರೇ ಮುಖ್ಯ ರಸ್ತೆಗಳಿಗೆ ಕಲ್ಲು- ಮಣ್ಣು ಸುರಿದು ತೇಪೆ ಹಚ್ಚುವ ಕೆಲಸ ಮಾಡುತ್ತಿರೋದು ವಿಷಾಧನೀಯ.
ಕೊರಟಗೆರೆಯಿಂದ ಬೈರೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಪಿಡ್ಲ್ಯೂಡಿ ಮುಖ್ಯರಸ್ತೆಯ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರನ ಜೊತೆ ಅಧಿಕಾರಿ ವರ್ಗವು ಸಹ ಕಾಣೆಯಾಗಿ ಗ್ರಾಮೀಣ ರಸ್ತೆಗಳು ಗುಂಡಿಮಯ ಆಗಿವೆ, ಬಿ.ಡಿ.ಪುರದಿಂದ ಹೊಳವನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯೇ ಮಾಯವಾಗಿ ಗುಂಡಿಗಳೇ ಹೆಚ್ಚಾಗಿ ಅಪಘಾತದ ಸಂಖ್ಯೆ ಪ್ರತಿನಿತ್ಯ ಏರಿಕೆ ಆಗುತ್ತಲೇ ಇದೆ.
Comments are closed.