ಕಲುಷಿತ ನೀರು ಸೇವಿಸಿ ವಾರದಲ್ಲಿ ಇಬ್ಬರು ಸಾವು

ಸೋರಲಮಾವು ಗ್ರಾಮದಲ್ಲಿ 400 ಕ್ಕೂ ಹೆಚ್ಚು ಮಂದಿಗೆ ವಾಂತಿಬೇಧಿ

1

Get real time updates directly on you device, subscribe now.


ಹುಳಿಯಾರು: ಹಂದನಕೆರೆ ಹೋಬಳಿಯ ಸೋರಲಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಒಂದೇ ವಾರದಲ್ಲಿ ಎರಡು ಸಾವು ಸಂಭವಿಸಿರುವ ಘಟನೆ ನಡೆದಿದೆ, ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು, ಉಪ ವಿಭಾಗಾಧಿಕಾರಿ ಸಪ್ತಶ್ರೀ ಹಾಗೂ ತಹಸೀಲ್ದಾರ್ ಕೆ ಪುರಂದರ್ ಭೇಟಿ ನೀಡಿ ಸಮಸ್ಯೆಯ ಮಾಹಿತಿ ಪಡೆದುಕೊಂಡರು, ಹಂದನಕೆರೆ ಪೊಲೀಸ್ ಠಾಣೆಯ ಪಿಎಸ್ಸೈ ರವೀಂದ್ರ ಅವರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮೃತ ದುರ್ದೈವಿಗಳು ರಂಗಮ್ಮ (55) ಹಾಗೂ ಭುವನೇಶ್ವರಿ (13) ಇಬ್ಬರೂ ಇದೇ ಗ್ರಾಮದ ಒಂದೇ ಟ್ಯಾಂಕ್ ನಿಂದ ನೀರು ಸೇವಿಸುತ್ತಿದ್ದವರು, ಮಂಗಳವಾರ ಅಸುನೀಗಿದ ರಂಗಮ್ಮನವರು ಅವರ ಮಗ ರಮೇಶ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ, ಈಗ್ಗೆ ಎರಡು ವರ್ಷದ ಹಿಂದೆ ರಮೇಶ್ ಅವರ ಪತ್ನಿ ಕೂಡ ಕಾಯಿಲೆಬಿದ್ದು ನಿಧನರಾಗಿದ್ದರು, ಆ ಕುಟುಂಬದ ಗೃಹಕಾರ್ಯಗಳಿಗಿದ್ದ ಏಕೈಕ ಆಧಾರ ಮೃತರಾಗಿರುವ ರಂಗಮ್ಮನೇ ಆಗಿದ್ದರು.

ಆರೋಗ್ಯ ತಪಾಸಣಾ ಶಿಬಿರ : ಹಂದನಕೆರೆ ಹೋಬಳಿಗೇ ದೊಡ್ಡ ಊರಾಗಿರುವ ಸೋರಲಮಾವು ಗ್ರಾಮದಲ್ಲಿ ಸರಿ ಸುಮಾರು 900 ಕುಟುಂಬಗಳಿದ್ದು, ಸುಮಾರು 400 ಕುಟುಂಬಗಳ ಸದಸ್ಯರು ತೀವ್ರತರವಾದ ವಾಂತಿ ಬೇಧಿಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ, ಇನ್ನೂ ಕೆಲವರು ಈಗಲೂ ವಾಂತಿ-ಬೇಧಿಯಿಂದ ಬಳಲುತ್ತಿದ್ದಾರೆ, ಕಲುಷಿತ ನೀರಿನ ಸೇವನೆಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು, ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಮತ್ತು ಪಿಡಿಒ ನವೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!