ರಸ್ತೆ ಇಕ್ಕೆಲಗಳಲ್ಲಿ ತುಂಬಿದೆ ಕಟ್ಟಡ ತ್ಯಾಜ್ಯ

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

4

Get real time updates directly on you device, subscribe now.


ಕುಣಿಗಲ್: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಹೃದಯ ಭಾಗದಲ್ಲಿನ ಮುಖ್ಯರಸ್ತೆ ಒತ್ತುವರಿ ಜೊತೆಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವ ಕಾರಣ ರಸ್ತೆ ಹಾಳಾಗುವ ಹಂತಕ್ಕೆ ತಲುಪಿದ್ದು ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡು ರಸ್ತೆ ಸಂರಕ್ಷಣೆಗೆ ಮುಂದಾಗಬೇಕೆಂದು ನಾಗರಿಕರು, ಪುರಸಭೆ ಮಾಜಿ ಸದಸ್ಯರು ಆಗ್ರಹಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಹಳೇರಾಷ್ಟ್ರೀಯ ಹೆದ್ದಾರಿ 48ನ್ನು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರ ಸತತ ಪ್ರಯತ್ನದಿಂದಾಗಿ 2008- 09ರಲ್ಲಿ ಅಗಲಿಕರಣಗೊಂಡಿದ್ದು, ಸೂಕ್ತ ಅನುದಾನದ ಕೊರತೆಯಿಂದ ರಸ್ತೆ ಅಭಿವೃದ್ಧಿಯಾಗದೆ ಕನ್ನಡ ಸಂಘಟನೆಗಳು, ನಾಗರಿಕ ಸಂಘಟನೆಗಳು ಕುಣಿಗಲ್ ಬಂದ್ ಮಾಡುವ ಮೂಲಕ ಹಲವು ರೀತಿಯ ಹೋರಾಟ ಹಮ್ಮಿಕೊಂಡು ಕೆಲವಾರು ವರ್ಷಗಳ ಕಾಲ ಸತತ ಹೋರಾಟದ ಪರಿಣಾಮವಾಗಿ ಮಾಜಿ ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕ ಡಿ.ನಾಗರಾಜಯ್ಯ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ಕ್ರಮದಿಂದಾಗಿ ವಿವಿಧ ಹಂತದ ಅನುದಾನದಿಂದ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಹೃದಯ ಭಾಗದ ರಸ್ತೆ ಅಭಿವೃದ್ಧಿಯಾಗಿದೆ, ಪಟ್ಟಣದಲ್ಲಿ ಹಾದು ಹೋಗಿರುವ ಹಳೇ ರಾಷ್ಟ್ರೀಯ ಹೆದ್ದಾರಿ 48 ಅರ್ಧ ಭಾಗ ರಾಜ್ಯ ಮುಖ್ಯ ಹೆದ್ದಾರಿಯಾದರೆ, ಇನ್ನರ್ಧ ಜಿಲ್ಲಾ ಮುಖ್ಯರಸ್ತೆಯಾಗಿ ಘೋಷಣೆಯಾಗಿ ಮಾಲೀಕತ್ವ ಲೋಕೋಪಯೋಗಿ ಇಲಾಖೆಯದ್ದಾದರೆ, ನಿರ್ವಹಣೆ ಪುರಸಭೆಯದ್ದಾಗಿದೆ, ಬೀದಿ ದೀಪ ನಿರ್ವಹಣೆ, ಹೆದ್ದಾರಿ ಒತ್ತುವರಿ, ಚರಂಡಿ ಸ್ವಚ್ಛತೆ, ರಸ್ತೆ ಸ್ವಚ್ಛತೆ ಪುರಸಭೆ ನಿರ್ವಹಣೆ ಮಾಡುತ್ತಿದೆ.

ಪುರಸಭೆ ಅಧಿಕಾರಿಗಳು ದಿವ್ಯನಿರ್ಲಕ್ಷ್ಯದಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ಪಟ್ಟಣದ ಯಾವುದೇ ವಾರ್ಡ್ನಲ್ಲಿ ಕಟ್ಟಡ ಹೊಡೆದರೆ ಕಟ್ಟಡ ತ್ಯಾಜ್ಯ, ರಾತ್ರಿವೇಳೆ ದುಷ್ಕರ್ಮಿಗಳು ಸುರಿದು ಹೋಗುತ್ತಿದ್ದಾರೆ,
ಇನ್ನಾದರೂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ರಸ್ತೆ ಇಕ್ಕೆಲಗಳಲ್ಲಿನ ತ್ಯಾಜ್ಯ ತೆರವುಗೊಳಿಸಿ, ಚರಂಡಿ, ರಸ್ತೆ ಮೇಲಿನ ಮಳಿಗೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವ ಜೊತೆಯಲ್ಲಿ ಕರ್ತವ್ಯ ಬದ್ಧತೆ ಮೆರೆಯಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!