ಕುಣಿಗಲ್: ಇತಿಹಾಸ ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗಳ ಮಹಾ ರಥೋತ್ಸವನ್ನು ಕೊವಿಡ್ ಸೋಂಕಿನ ಪರಿಣಾಮ ಸರಳವಾಗಿ ಆಚರಿಸಲಾಯಿತು.
ಬೆಳಗಿನಿಂದಲೆ ಭಕ್ತರು ಕ್ಷೇತ್ರದೆಡೆ ಬರಲು ಆಗಮಿಸಿದ್ದು ಪೊಲೀಸರು ಶ್ರೀಕ್ಷೇತ್ರ ಪ್ರವೇಶಿಸುವ ಮೂರು ಕಡೆಯ ರಸ್ತೆಗಳಲ್ಲೆ ಬ್ಯಾರೀಕೆಡ್ ಹಾಕಿ, ಕೊವಿಡ್ ನಿಯಮಾವಳಿಗಳ ಪಾಲನೆ ನಿಟ್ಟಿನಲ್ಲಿ ಭಕ್ತರನ್ನು ವಾಪಸ್ ಕಳಿಸಿದರು. ಶ್ರೀಗಳ ಉತ್ಸವ ಮೂರ್ತಿಯನ್ನು ನೆರೆದಿದ್ದ ಯಡಿಯೂರು, ಬೀರಗಾನಹಳ್ಳಿಯ ಭಕ್ತರು, ಗ್ರಾಮಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ನೆರವೇರಿಸಿ ಕೊರೊನ ನಿರ್ಮೂಲನೆಗೆ ಶ್ರೀಗಳಲ್ಲಿ ವಿಶೇಷವಾಗಿ ಸಂಕಲ್ಪಿಸಿ ಪೂಜೆ ಸಲ್ಲಿಸಿ ರಥದಲ್ಲಿ ಕೂರಿಸಿದರು.
ನಂದಿ ದ್ವಜಕ್ಕೆ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಬಾಲ ಮಂಜುನಾಥಸ್ವಾಮಿ, ಯಡಿಯೂರು ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯದಲ್ಲಿ ಶಾಸಕ ಡಾ.ರಂಗನಾಥ್ ಪೂಜೆ ಸಲ್ಲಿಸಿದ ನಂತರ ರಥ ಎಳೆದು ವಿಧಿ ವಿಧಾನ ಪೂರೈಸಿದರು. ಕೊವಿಡ್ ನಿಯಮಾವಳಿಗಳ ಪಾಲನೆಗೆ ದೇವಾಲಯ ಆಡಳಿತ ಮಂಡಳಿ ಭಕ್ತರೊಂದಿಗೆ ಜಟಾಪಟಿ ನಡೆಸಿ ಅಸಮಾಧಾನಕ್ಕೂ ಕಾರಣವಾದ ಘಟನೆಯೂ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಮೃತೂರು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದರು.
ಸಿದ್ದಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ
Get real time updates directly on you device, subscribe now.
Comments are closed.