ವಿದ್ಯಾರ್ಥಿಗಳಿಗೆ ಆಳವಾದ ಅಧ್ಯಯನ ಅಗತ್ಯ

14

Get real time updates directly on you device, subscribe now.


ತುಮಕೂರು: ಯುವ ಜನತೆಯಲ್ಲಿರುವ ಹೊಸ ಹೊಸ ಐಡಿಯಾಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಮತ್ತಷ್ಟು ಜನಪರವಾಗಿಸುವ ನಿಟ್ಟಿನಲ್ಲಿ ಶ್ರೀದೇವಿ ಇಂನಿಯರಿಂಗ್ ಕಾಲೇಜು ಆಯೋಜಿಸಿರುವ 24 ಗಂಟೆಗಳ ಸುದೀರ್ಘ ಹ್ಯಾಕಥಾನ್ ಪೂರಕವಾಗಿ ಕೆಲಸ ಮಾಡಲಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಎಂ.ಆರ್.ಹುಲಿ ನಾಯ್ಕರ್ ತಿಳಿಸಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ 24 ಗಂಟೆಗೆ ಹ್ಯಾಕಥಾನ್ ಗೆ ಚಾಲನೆ ನೀಡಿ ಮಾತನಾಡಿ, ಯುವ ತಂತ್ರಜ್ಞರನ್ನು ಸಮಾಜಮುಖಿಯಾಗಿಸಲು ಇದೊಂದು ಉತ್ತಮ ವೇದಿಕೆಯಾಗಿದೆ, ಹ್ಯಾಕಥಾನ್ ನಲ್ಲಿ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳು ಸುಮಾರು 80ಕ್ಕೂ ಹೆಚ್ಚು ತಂಡಗಳು ಭಾಗವಹಿಸುತಿದ್ದು, ಉದ್ದಿಮೆದಾರರು, ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.

ಶ್ರೀದೇವಿ ಸಂಸ್ಥೆಯಿಂದ ಹೊರತರುವ ಶ್ರೀದೇವಿ ಅಂತರಂಗ ಎಂಬ ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸೈಬರ್ ಕ್ರೈಮ್ ಅಂಡ್ ನಾರ್ ಕೋಟಿಕ್ ವಿಭಾಗದ ಡಿಐಜಿ ಡಾ.ಪ್ರಣಬ್ ಮೊಹಂತಿ, ಕೊರೊನ ನಂತರದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ವೈದ್ಯಕೀಯ ಕ್ಷೇತ್ರವನ್ನು ಇಂಜಿನಿಯರಿಂಗ್ ಆವರಿಸಿಕೊಳ್ಳುತ್ತಿದೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದ್ದು, ಈ ಪೈಪೋಟಿ ಎದುರಿಸಲು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಳವಾದ ಅಧ್ಯಯನ ಅಗತ್ಯವಾಗಿದೆ, ಒಂದು ಕಾಲದಲ್ಲಿ ಸಾಮಾಜಿಕ ವಿಷಯಗಳಾಗಿದ್ದ ಕೃಷಿ, ಪರಿಸರ,ಆರೋಗ್ಯ ಕ್ಷೇತ್ರಗಳು ತಂತ್ರಜ್ಞಾನದ ವಿಷಯಗಳಾಗಿ ಪರಿವರ್ತನೆ ಹೊಂದಿವೆ, ಎಲ್ಲಾ ಕ್ಷೇತ್ರಗಳಲ್ಲಿ ಇಂಜಿನಿಯ ರಿಂಗ್ ಆವರಿಸಿಕೊಳ್ಳುತ್ತಿದೆ.ವೈದ್ಯಕೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತೀವೆ. ಇವುಗಳನ್ನು ಬಳಕೆ ಮಾಡಿಕೊಂಡು ಮೋಸ ಮಾಡುವವರ ಸಂಖ್ಯೆಯೂ ಹೆಚ್ಚಿದೆ, ಸೈಬರ್ ಕ್ರೈಮ್ ಬಗ್ಗೆ ಯುವಜನರು ಎಚ್ಚರದಿಂದ ಇರಬೇಕೆಂದು ಸಲಹೆ ನೀಡಿದರು.

ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, 21ನೇ ಶತಮಾನ ಯುವಜನರ ಒಳ್ಳೆಯ ಕಾಲವಾಗಿದೆ, ನಮ್ಮಗಳ ಹಾಗೆ ಹಸಿವು, ಬಡತನದ ಅರಿವು ನಿಮಗಿಳಲ್ಲ, ಸ್ವಾತಂತ್ರ ಬಂದ ಕಾಲದಲ್ಲಿ ಹಸಿವು, ಬಡತನ ನಿಮೂರ್ಲನೆ ಮೊದಲ ಆದ್ಯತೆಯಾಗಿತ್ತು, ಆದರೆ ಈಗಿನ ಆದ್ಯತೆಗಳು ಬೇರೆಯಾಗಿದೆ, 2047ಕ್ಕೆ ವಿಕಸಿತ ಭಾರತದಲ್ಲಿ ಐದು ಟ್ರಿಯಲನ್ ಎಕಾನಮಿ ಸಾಧಿಸುವ ಮಹತ್ವದ ಗುರಿ ದೇಶದ ಮುಂದಿದೆ, ಇದಕ್ಕೆ ಪೂರಕವಾಗಿ ಮೇಕ್ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ, ವಿದ್ಯಾರ್ಥಿಗಳು ಉದ್ಯೋಗದ ಜೊತೆಗೆ, ಸಂಶೋಧನೆಯ ಕಡೆಗೂ ಹೆಚ್ಚಿನ ಒಲವು ತೋರಿಸಬೇಕಿದೆ, ನಿಮ್ಮ ಸಾಧನೆಯ ಹಿಂದೆ ನಿಮ್ಮ ಪೋಷಕರ ತ್ಯಾಗವಿದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ತಜ್ಞರಾದ ಜಿತೇಶ್ ಬಜಾಜ್, ಮುಖ್ಯ ತಾಂತ್ರಿಕ ಅಧಿಕಾರಿ ರಾಜೇಂದ್ರ ಸಾರಂಗಿ, ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಡಾ.ರಮಣ ಹುಲಿನಾಯ್ಕರ್, ಡೈರೆಕ್ಟರ್ ಎಂ.ಎಸ್.ಪಾಟೀಲ್, ಡಾ.ಲಾವಣ್ಯ ರಮಣ್, ಅಂಬಿಕಾ ಹುಲಿನಾಯ್ಕರ್, ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್, ಹ್ಯಾಕಥಾನ್ ಮುಖ್ಯ ಸಂಚಾಲಕ ಡಾ.ಗಿರೀಶ್.ಎಲ್. ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!