ಬೇವಿನ ಮರ ನೆಲಸಮ- ಅಧಿಕಾರಿಗಳ ವಿರುದ್ಧ ಆಕ್ರೋಶ

1

Get real time updates directly on you device, subscribe now.


ಕುಣಿಗಲ್: ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿ ಬದಿಯ ಬೃಹತ್ ಬೇವಿನಮರವನ್ನು ಯಾವುದೇ ಅನುಮತಿ ಪಡೆಯದೆ ಕತ್ತರಿಸಿದ್ದು ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಬದಿಯಲ್ಲೆ ಬೆಳೆದಿದ್ದ ಒಂದನೇ ವಾರ್ಡ್ನ ಬಿದನಗೆರೆ ಸಮೀಪ ಬೃಹತ್ ಬೇವಿನ ಮರವನ್ನು ಖಾಸಗಿ ಸಾಮಿಲ್ ನವರು ಕ್ರೇನ್, ಯಂತ್ರಾಧರಿತ ಗರಗಸದಿಂದ ಕೆಲವೆ ಕ್ಷಣದಲ್ಲಿ ಕಡಿದು ಧರೆಗುಳಿಸಿದ್ದಾರೆ, ಈಬಗ್ಗೆ ಅಸಮಾಮಾಧಾನ ವ್ಯಕ್ತಪಡಿಸಿದ ಬಿದನಗೆರೆ ಗ್ರಾಮದ ದೇವರಾಜ್, ಮರ ಕಡಿಯುವ ಬಗ್ಗೆ ಪ್ರಶ್ನಿಸಿದ್ದು ಮರ ಕತ್ತರಿಸುವ ಸಾಮಿಲ್ ನವರು ಯಾವುದೇ ಅನುಮತಿ ಪತ್ರ ಹಾಜರು ಪಡಿಸಿಲ್ಲದ ಕಾರಣ, ಅರಣ್ಯ ಇಲಾಖಾಧಿಕಾರಿಗಳಿಗೆ ಕರೆ ಮಾಡಿದರೂ ಆ ಕ್ಷಣಕ್ಕೆ ಅಧಿಕಾರಿಗಳು ಸ್ಪಂದಿಸದೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖಾಧಿಕಾರಿಗಳು ಸಾಮಿಲ್ ಲಾಭಿಗೆ ಒಳಗಾಗಿದ್ದು ರಸ್ತೆಬದಿಯ ಬೇವಿನಮರವು ಇನ್ನು ಸಧೃಢವಾಗಿಯೆ ಇದ್ದು ಯಾವುದೇ ಹರಾಜು ಪ್ರಕ್ರಿಯೆ ನಡೆಸದೆ ಕತ್ತರಿಸಿದ್ದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ, ಈ ಭಾಗದ ಅರಣ್ಯ ಇಲಾಖೆ ವಾಚರ್ ಯಾರೆಂದು ಸಹ ಪ್ರಚುರ ಪಡಿಸಿಲ್ಲ, ಇದು ಅರಣ್ಯ ಇಲಾಖೆಯ ಮರ ಸಂರಕ್ಷಣೆ ಕಾರ್ಯ ವೈಖರಿ, ಸರ್ಕಾರಿ ರಜೆ ದಿನದ ಲಾಭ ಪಡೆದು ಕೆಲವರು ರಸ್ತೆಬದಿಯ ಮರಗಳಿಗೆ ಕೊಡಲಿ ಹಾಕುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ.

ಪಟ್ಟಣದ ಹೆದ್ದಾರಿಯ ಬದಿಯಲ್ಲಿ ಯಾವುದೆ ಅನುಮತಿ ಪಡೆಯದೆ ಮರ ಕತ್ತರಿಸಿರುವುದು ಇಲಾಖೆ ಗಮನಕ್ಕೆ ಬಂದಿದೆ, ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!