ಕುಣಿಗಲ್: ತಾಲೂಕು ಒಕ್ಕಲಿಗ ಸಂಘಕ್ಕೆ ಸದಸ್ಯತ್ವ ನೀಡುವಂತೆ ಆಗ್ರಹಿಸಿ ಸದಸ್ಯತ್ವ ಆಕಾಂಕ್ಷಿಗಳು ಬುಧವಾರ ತಾಲೂಕು ಒಕ್ಕಲಿಗ ಸಂಘದ ಕಚೇರಿಯ ಮುಖ್ಯದ್ವಾರದ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕು ಒಕ್ಕಲಿಗರ ಸಂಘಕ್ಕೆ ಸದಸ್ಯತ್ವ ನೀಡುವಂತೆ ಆಗ್ರಹಿಸಿ ಕಳೆದ ಕೆಲದಿನಗಳ ಹಿಂದೆ ಸದಸ್ಯತ್ವ ಆಕಾಂಕ್ಷಿಗಳು ಅಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದರು, ಅಧ್ಯಕ್ಷರು ಸ್ಪಂದಿಸಿಲ್ಲ ಎಂದು ಆರೋಪಿಸಿ ಬುಧವಾರ ಸಂಘದ ಕಚೇರಿ ಮುಖ್ಯದ್ವಾರದ ಮುಂಭಾಗ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಮುಖಂಡ ಅರುಣ್ ಕುಮಾರ್ ಮಾತನಾಡಿ, ಸಂಘಕ್ಕೆ ಕಳೆದ 45 ವರ್ಷದಿಂದ ಸದಸ್ಯತ್ವ ನೀಡಿಲ್ಲ, ಸಂಘದ ಅಧ್ಯಕ್ಷರೆಂದು ಹೇಳಿಕೊಳ್ಳುವ ಮಾಜಿ ಶಾಸಕರು ತಾಲೂಕಿನ ಒಕ್ಕಲಿಗ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ, ಮಾಜಿ ಶಾಸಕ ಡಿ.ನಾಗರಾಜಯ್ಯ ಅವರ ಮಕ್ಕಳಿಗಾಗಲಿ, ಶಾಸಕ ಡಾ.ರಂಗನಾಥ್ ಅವರಿಗಾಗಲಿ, ಮಾಜಿ ಸಚಿವರಾದ ಹುಚ್ಚಮಾಸ್ತಿಗೌಡ, ಅಂದಾನಯ್ಯ ಸೇರಿದಂತೆ ಅನೇಕ ಒಕ್ಕಲಿಗ ಗಣ್ಯರಿಗೆ ಸದಸ್ಯತ್ವ ನೀಡಿಲ್ಲ, ಸಂಘದ ಬಗ್ಗೆ ಕೇಳಿದರೆ ಇದು ಜಾತಿಯ ಸಂಘವಲ್ಲ, ಸಹಕಾರ ತತ್ವದಡಿಯಲ್ಲಿ ನಡೆಯುತ್ತಿರುವ ಸಂಘ ಎಂದು ದಾರಿ ತಪ್ಪಿಸುತ್ತಿದ್ದಾರೆ, ತುಮಕೂರು ಜಿಲ್ಲಾ ಸಂಘ, ಬೆಂಗಳೂರಿನ ರಾಜ್ಯ ಸಂಘದಲ್ಲಿ ಸದಸ್ಯತ್ವ ನೀಡಿದರೂ ತಾಲೂಕು ಸಂಘದಲ್ಲಿ ಏಕೆ ಸದಸ್ಯತ್ವ ನೀಡುತ್ತಿಲ್ಲ ಎಂದು ಹೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಬಿ.ಎಂ.ಹುಚ್ಚೇಗೌಡ, ಶಿವಣ್ಣ, ಶ್ರೀನಿವಾಸ, ಜಯರಾಮ, ವೆಂಕಟೇಶ, ಸಿದ್ದರಾಮಯ್ಯ, ಬೈರಪ್ಪ, ನಾರಾಯಣ ಇತರರು ಇದ್ದರು.
Comments are closed.