ಶಿರಾ: ಶಿರಾ ತಾಲೂಕನ್ನು ಬರಗಾಲ ಮುಕ್ತ ತಾಲೂಕನ್ನಾಗಿ ಮಾಡುವ ನನ್ನ ಉದ್ದೇಶ ನನಸಾಗಿದೆ, ಇನ್ನೊಂದು ವರ್ಷದಲ್ಲಿ ಎತ್ತಿನಹೊಳೆ, ಭದ್ರ ಮೇಲ್ದಂಡೆ ನೀರು ತಂದು ತಾಲೂಕನ್ನು ಸಮೃದ್ಧ ಮಾಡುತ್ತೇನೆ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಬುಧವಾರ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಭೂಪಸಂದ್ರ ಕೆರೆಗೆ ದಂಪತಿ ಸಮೇತ ಗಂಗಾಪೂಜೆ ನೆರವೇರಿಸಿ ಬಾಗೀನ ಅರ್ಪಣೆ ಮಾಡಿ ಮಾತನಾಡಿ, ಶಿರಾ ತಾಲೂಕಿಗೆ ಹೇಮಾವತಿ, ಎತ್ತಿನ ಹೊಳೆ, ಭದ್ರ ನೀರು ಹರಿದ ಮೇಲೆ ತಾಲೂಕು ಶಾಶ್ವತವಾಗಿ ಬರಗಾಲ ಮುಕ್ತ ತಾಲೂಕಾಗಿ ಮಾಡಿ ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದ ಅವರು ಈ ಬಾರಿ ಮಳೆ ವೈಪರಿತ್ಯದಿಂದ ಶಿರಾ ತಾಲೂಕಿನಲ್ಲಿ ಸರಿಯಾಗಿ ಮಳೆ ಬರಲಿಲ್ಲ, ಆದರೂ ಹೇಮಾವತಿ ನೀರಿನಿಂದ ತಾಲೂಕಿನ 20 ಕೆರೆಗಳು ಹಾಗೂ ಕಳ್ಳಂಬೆಳ್ಳದಿಂದ ಮದಲೂರು, ಹೇರೂರುವರೆಗೂ ಬ್ಯಾರೇಜ್ ಗಳು ತುಂಬಿವೆ, ಇದರಿಂದ ಅಂತರ್ಜಲ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟಿ.ಬಿ.ಜಯಚಂದ್ರ ಅವರು ಕ್ಷೇತ್ರದಲ್ಲಿ ನೀರಾವರಿ ವಿಚಾರದಲ್ಲಿ ಅವರ ಬದ್ಧತೆ, ಹೋರಾಟ ಮತ್ತು ಪರಿಶ್ರಮ ಸ್ಮರಿಸಿ ಗ್ರಾಮಸ್ಥರು ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿರ್ಮಲ ಟಿ.ಬಿ.ಜಯಚಂದ್ರ, ನಗರಸಭಾ ಅಧ್ಯಕ್ಷ ಬುರಾನ್ ಅಹಮದ್, ಗ್ರಾಮ ಪಂಚಾಯಿತಿಯ ಅಧ್ಯಕ್ಷ ಬಿ.ಎಲ್.ಜಗದೀಶ್ ಗೌಡ, ಉಪಾಧ್ಯಕ್ಷ ಗೋವಿಂದರಾಜು, ಸದಸ್ಯ ಚೆನ್ನಬಸವ, ಮಾಜಿ ಅಧ್ಯಕ್ಷರಾದ ಮಮತಾ ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪರ್ವತಪ್ಪ, ಶಿವಣ್ಣ ಕಳ್ಳಿಪಾಳ್ಯ, ಮಯಾಸಂದ್ರ ಅರುಣ್ ಕುಮಾರ್, ಡಾ. ಮನು ಪಟೇಲ್, ಗುಳಿಗೇನಹಳ್ಳಿ ನಾಗರಾಜು, ಬಾಲೆನಹಳ್ಳಿ ಪ್ರಕಾಶ್, ನವೀನ್ ವೈಟಿ ಯಲದಬಾಗಿ ಇತರರು ಹಾಜರಿದ್ದರು.
Comments are closed.