ಕುಣಿಗಲ್: ಪಟ್ಟಣದ ಮಹಾತ್ಮಗಾಂದಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಪ್ರಾಚಾರ್ಯರ ಕ್ರಮ ಖಂಡಿಸಿ ವಿದ್ಯಾರ್ಥಿಗಳು, ಉಪನ್ಯಾಸಕರು ಪ್ರತಿಭಟನೆ ನಡೆಸಿದರೆ, ಪ್ರಾಚಾರ್ಯರು ಉಪನ್ಯಾಸಕರ ಗುಂಪುಗಾರಿಕೆ ಖಂಡಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರದಿಂದ ದ್ವಿತೀಯ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ಇತ್ತು, ಆದರೆ ಪರೀಕ್ಷೆ ಸಮಯ ಇತರೆ ವಿಷಯಕ್ಕೆ ಉಪನ್ಯಾಸಕರು, ಪ್ರಾಚಾರ್ಯರ ನಡುವೆ ಹಿಂದಿನಿಂದ ನಡೆದುಕೊಂಡ ಕೆಲ ವಿಷಯಗಳ ನಡುವೆ ವೈಮನಸ್ಯ ಉಂಟಾಗಿ ಒಂಭತ್ತಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ ಪರೀಕ್ಷೆಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಹಲವಾರು ವಿದ್ಯಾರ್ಥಿಗಳು ಪ್ರಾಚಾರ್ಯರ ಕೊಠಡಿ ಮುಂದೆ ಪ್ರತಿಭಟನೆ ನಡೆಸಿದರು.
ಉಪನ್ಯಾಸಕ ಬಸವರಾಜು ಇತರರು, ಕಳೆದ ಕೆಲವಾರು ವರ್ಷಗಳಿಂದ ಪ್ರಾಚಾರ್ಯರು ನಮಗೆ ಸಹಕಾರ ನೀಡದೆ ಏಕವಚನದಲ್ಲಿ ಅಶ್ಲೀಲವಾಗಿ ನಿಂದಿಸುತ್ತಾರೆ, ನಿಯಮಬದ್ಧವಾಗಿ ನಮಗೆ ಸಿಗಬೇಕಾದ ಸರ್ಕಾರದ ಸವಲತ್ತು ಕೊಡಿಸಲು ಅಡಚಣೆ ಮಾಡಿ ದೌರ್ಜನ್ಯ ನಡೆಸುತ್ತಾರೆ, ಕೇಳಲು ಹೋದರೆ ಕೆಟ್ಟ ಪದಗಳಲ್ಲಿ ನಿಂದಿಸುತ್ತಾರೆ, ಲ್ಯಾಬ್ಗೆ ಬೇಕಾದ ವಸ್ತು ಕೊಡಿಸಲ್ಲ, ಎನ್ಎಸ್ಎಸ್ ಕ್ಯಾಂಪ್ ದುಡ್ಡು ಕೊಟ್ಟಿಲ್ಲ, ಶೌಚಾಲಯ ಸ್ವಚ್ಛಗೊಳಿಸಿಲ್ಲ, ಪ್ರಥಮ ಪಿಯು ವಿದ್ಯಾರ್ಥಿಗಳಿಂದ ದಾಖಲಿಗೆ, ಅಂಕಪಟ್ಟಿ ನೀಡಲು ಹೆಚ್ಚುವರಿ ಹಣ ಕೇಳುತ್ತಾರೆ, ನಾವು ಪ್ರಶ್ನಿಸಲು ಹೋದರೆ ನಮ್ಮನ್ನು ನಿಂದಿಸಿ ಮೆಮೋ ಕೊಡುತ್ತಾರೆ, ಇವರ ಕಾರ್ಯ ವೈಖರಿಯಿಂದ ಕಾಲೇಜಿನ ದಾಖಲಾತಿ ಗಣನೀಯವಾಗಿ ಕುಸಿದಿದೆ, ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ವಿಧಿ ಇಲ್ಲದೆ ಪ್ರತಿಭಟನೆಗೆ ಇಳಿಯಬೇಕಿದೆ, ವರ್ಗಾವಣೆ ಮಾಡಿದರೆ ಎಲ್ಲರನ್ನು ವರ್ಗಾವಣೆ ಮಾಡಿ ಇತಿಹಾಸ ಪ್ರಸಿದ್ದ ಕಾಲೇಜು ಉಳಿಸಬೇಕೆಂದರು.
ವಿದ್ಯಾರ್ಥಿನಿಯರು ಮಾತನಾಡಿ ನಮಗೆ ಇಂದು ಹಿಂದಿ ಇದೆ ಎಂದು ಹೇಳಿದ್ದರು, ನಾವು ಹಿಂದಿ ಭಾಷೆಗೆ ತಯಾರಾಗಿ ಬಂದಿದ್ದು ಇವತ್ತು ಪರೀಕ್ಷೆ ಇಲ್ಲ ಹೋಗಿ ಎನ್ನುತ್ತಾರೆ, ಮನೆಯಲ್ಲಿ ನಮಗೆ ಬಯ್ಯುತ್ತಾರೆ, ಇಲ್ಲಿ ಪ್ರಾಚಾರ್ಯರು ಸಹ ಏಕವಚನದಲ್ಲಿ ನಿಂದಿಸುತ್ತಾರೆ, ಸ್ಯಾನಿಟೈಸರ್ ಬರಿ ಸೋಪು ನೀರು, ಯಾಕೆ ಹೀಗೆ ಎಂದು ಕೇಳಿದರೆ ನೀವ್ಯಾಕ್ ಈ ಸರ್ಕಾರಿ ಕಾಲೇಜಿಗೆ ಬರ್ತೀರಾ ಬೇರೆ ಖಾಸಗಿ ಕಾಲೇಜಿಗೆ ಹೋಗಿ ಎಂದು ಕರಪತ್ರ ನೀಡಿ ನಿಂದಿಸುತ್ತಾರೆ. ಹೆಚ್ಚುವರಿ ಹಣ ವಸೂಲು ಮಾಡುತ್ತಾರೆ, ಕೊಡೊದಿಲ್ಲ ಎಂದರೆ ನಿಮ್ಮನ್ನು ನೋಡಿ ಕೊಳ್ತೇನೆ ಎಂದು ಬೆದರಿಕೆ ಹಾಕುತ್ತಾರೆ, ಶೌಚಾಲಯ ವ್ಯವಸ್ಥೆ ಹಾಳಾಗಿದೆ ನಮ್ಮ ಸಮಸ್ಯೆ ಯಾರಿಗೆ ಹೇಳೋಣ ಶಾಸಕರಿಗೆ ಹೇಳಿದರೆ ನಮಗೆ ಏನು ಹೇಳಬೇಡಿ ಎನ್ನುತ್ತಾರೆ ಎಂದು ಆರೋಪಿಸಿದರು.
ಉಪನ್ಯಾಸಕರು, ವಿದ್ಯಾರ್ಥಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಚಾರ್ಯ ಗೋವಿಂದರಾಜು, ನಾನು ಇವರನ್ನು ಸಮಯಕ್ಕೆ ಸರಿಯಾಗಿ ಬನ್ನಿ ಎಂದರೆ ಇವರು ಗುಂಪುಗಾರಿಕೆ ಮಾಡಿಕೊಂಡು ಮಕ್ಕಳನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಾರೆ, ನಾನು ಯಾವುದೇ ಹೆಚ್ಚುವರಿ ಹಣಪಡೆದಿಲ್ಲ, ನಾನು ದಲಿತ ವರ್ಗಕ್ಕೆ ಸೇರಿದವನಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಪದೋನ್ನತಿ ಹೊಂದುತ್ತಿದ್ದು ಇದನ್ನು ಸಹಿಸದೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಿಯಮ ಉಲ್ಲಂಸಿರುವ ಉಪನ್ಯಾಸಕರ ಮೇಲೆ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಕುಣಿಗಲ್ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರ ಪ್ರತಿಭಟನೆ
ಪ್ರಾಚಾರ್ಯ- ಉಪಾನ್ಯಾಸಕರ ನಡುವೆ ಫೈಟ್
Get real time updates directly on you device, subscribe now.
Prev Post
Comments are closed.