ರಾಜ್ಯೋತ್ಸವದ ದಿನ ರಾಷ್ಟ್ರ, ನಾಡ ಧ್ವಜಕ್ಕೆ ಅಪಮಾನ

15

Get real time updates directly on you device, subscribe now.


ಕೊರಟಗೆರೆ: ಕರ್ನಾಟಕ ಸರ್ಕಾರ ರಾಷ್ಟ್ರ ಮತ್ತು ನಾಡ ಧ್ವಜಕ್ಕೆ ಅಪಮಾನ ಮಾಡದೆ ಗೌರವ ಸೂಚಿಸುವಂತೆ ಆದೇಶ ನೀಡಿದರು ಸಹ ಕೊರಟಗೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಧಿಕಾರಿಗಳು ಸರ್ಕಾರದ ನಿರ್ದೇಶನವನ್ನೇ ಗಾಳಿಗೆ ತೂರಿ ರಾಷ್ಟ್ರ ಮತ್ತು ನಾಡ ಧ್ವಜಕ್ಕೆ ಅಪಮಾನ ಮಾಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೊರಟಗೆರೆ ಪಟ್ಟಣದ ಹೆಚ್ ಡಿಎಫ್ ಸಿ ಬ್ಯಾಂಕ್ ಪಕ್ಕದಲ್ಲಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ಕಟ್ಟಡದ ಮೇಲೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಸ್ಥಂಭದಲ್ಲಿ ರಾಷ್ಟ್ರ ಧ್ವಜ ಮೊದಲು ಹಾರಿಸಿ ನಂತರ ನಾಡ ಧ್ವಜವನ್ನ ಕಡ್ಡಿಗೆ ಸೇರಿಸಿ ಒಂದೇ ಧ್ವಜ ಸ್ಥಂಭದಲ್ಲಿ ಹಾರಿಸಿ ಅವಮಾನಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾರ್ವಜನಿಕರು ಗಮನಿಸಿ ವಿಷಯ ತಿಳಿಸಿದ ಕೂಡಲೇ ರಾಷ್ಟ್ರ ಮತ್ತು ನಾಡ ಧ್ವಜವನ್ನು ಪ್ರತ್ಯೇಕವಾಗಿ ಹಾರಿಸಿ ಅಭಿಮಾನ ತೋರಿರುವುದು ವಿಷಾದನೀಯ, ತ್ರಿವರ್ಣ ಧ್ವಜಕ್ಕೆ ಮತ್ತು ನಾಡ ಧ್ವಜಕ್ಕೆ ಅವಮಾನಿಸಿದ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯದಿಂದ ಆಗ್ರಹ ಕೂಡ ಕೇಳಿ ಬಂದಿದೆ.

Get real time updates directly on you device, subscribe now.

Comments are closed.

error: Content is protected !!