ಕುಣಿಗಲ್: ದಿಶಾಂಕ್ ಆಪ್ನಲ್ಲಿ ಪಟ್ಟಣದ ಕುಂಬಾರ ಗುಂಡಿ ಸ್ಮಶಾನದ ಮೂಲ ದಾಖಲೆಯಂತೆ ಹೆಸರು ನಿರ್ವಹಣೆ ಮಾಡಿ ದಾಖಲಿಸುವಂತೆ ಒತ್ತಾಯಿಸಿ ಭಜರಂಗದಳ ಪ್ರಖಂಡದ ಪ್ರಮುಖರು ತಹಶೀಲ್ದಾರ್ ಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಮನವಿ ನೀಡಿದ ನಂತರ ಮಾತನಾಡಿದ ಪ್ರಖಂಡದ ಪ್ರಮುಖ ಗಿರೀಶ್, ಕುಣಿಗಲ್ ಪಟ್ಟಣದ ಹೃದಯಭಾಗದಲ್ಲಿ ಇರುವ ಕಸಬಾ ಹೋಬಳಿ, ಕಸಬಾ ಗ್ರಾಮದ ಸರ್ವೆ ನಂಬರ್ 89ರಲ್ಲಿ 20.04 ಎಕರೆ ಕುಂಬಾರ ಗುಂಡಿ ಸ್ಮಶಾನ ಎಂಬ ದಾಖಲೆ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ, ಸದರಿ ಜಾಗದಲ್ಲಿ ಕ್ರಿಶ್ಚಿಯನ್, ಪ.ಜಾತಿ, ಪ.ಪಂಗಡದ ಜನಾಂಗ, ಆರ್ಯವೈಶ್ಯ ಜನಾಂಗ, ತಿಗಳ ಜನಾಂಗ ಸೇರಿದಂತೆ ಇತರೆ ವರ್ಗದ ಜನಾಂಗದವರು ತಮ್ಮ ಜನಾಂಗಕ್ಕೆ ಸ್ಮಶಾನದ ಜಾಗ ಗುರುತಿಸಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅಲ್ಲದೆ ಹಲವು ದಶಕಗಳಿಂದ ಕೆಲ ಜನಾಂಗದವರು ಹಿರಿಯರ ಗೋರಿಗಳನ್ನು ಕಟ್ಟಿ ವರ್ಷಕ್ಕೊಮ್ಮೆ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಭೂ ದಾಖಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಇದ್ದರೂ ಸರ್ವೆ ಇಲಾಖೆಯ ದಿಶಾಂಕ್ ಆಪ್ ನಲ್ಲಿ ಸದರಿ ಭೂಮಿಗೆ ಖಬರ್ ಸ್ಥಾನ ಎಂದು ನಮೂದು ಹೆಸರು ದಾಖಲಿಸಿದ್ದರಿಂದ ಇದು ಕೇವಲ ಒಂದು ವರ್ಗಕ್ಕೆ ಸೇರಿದ ಜಾಗ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ ಹಾಗೂ ಇಡೀ ಭೂಮಿಯ ಹಕ್ಕನ್ನು ಕಬಳಿಸುವ ಹುನ್ನಾರವಾಗಿದೆ, ಈ ರೀತಿಯ ಕೃತ್ಯದಿಂದ ಮುಂದಿನ ದಿನಗಳಲ್ಲಿ ವಿವಿಧ ಜನಾಂಗದವರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಇಲ್ಲದೆ ತೊಂದರೆಯಾಗಲಿದೆ.
ಪ್ರಮುಖರಾದ ಕಾರ್ತಿಕ್, ಅಜಯ್, ಮಂಜುನಾಥ ಇದ್ದರು.
ಕುಂಬಾರ ಗುಂಡಿ ಸ್ಮಶಾನ ರಕ್ಷಣೆ ಮಾಡಿ
Get real time updates directly on you device, subscribe now.
Prev Post
Next Post
Comments are closed.