ತುಮಕೂರು: ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಟೆಕ್ನೋ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್ ನ ಸಹಯೋಗದೊಂದಿಗೆ ವೃತ್ತಿಪರ ಪರೀಕ್ಷೆಯಾದ ಸಿಎ ಮತ್ತು ಸಿಎಸ್ ತರಗತಿಗಳು ನಡೆಯುತ್ತಿದ್ದು, ಇದೇ ಸೆಪ್ಟೆಂಬರ್ 2024ರ ಸಿಎ ಪೌಂಡೇಷನ್ ಪರೀಕೆಯಲ್ಲಿ ಒಟ್ಟು 9 ವಿದ್ಯಾರ್ಥಿಗಳಾದ ಚೇತನ್ ಕುಮಾರ್.ಎನ್, ಕುಮುದ.ಎಸ್, ದೀಪಶ್ರೀ.ಎ.ಕೆ, ನಿಶಾಂತ್.ಬಿ, ಸೈಯದ್ ಫೈಜನ್.ಕೆ, ಹರ್ಷಿತ್.ಸಿ, ತೇಜಸ್ವಿನಿ.ಬಿ, ಸ್ನೇಹ ಚೌದರಿ, ದುಶ್ಯಂತ್ ಕುಮಾರ್ ಹಾಗೂ ಸಿಎ ಇಂಟರ್ ಮಿಡಿಯಟ್ ಪರೀಕ್ಷೆಯಲ್ಲಿ ಎನ್.ಹರ್ಷಿತ್ ಜೈನ್, ಶಾಜಿಯಾ ಫಾತಿಮಾ ಉತ್ತೀರ್ಣರಾಗಿದ್ದು, ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ವೃತ್ತಿಪರ ಕೋರ್ಸ್ಗಳಾದ ಸಿಎ ಮತ್ತು ಸಿಎಸ್ ಪರೀಕ್ಷೆಗಳು ಹೆಚ್ಚು, ಹೆಚ್ಚು ಅವಕಾಶ, ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದೆ, ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭವಲ್ಲ ಆದರೂ ನಮ್ಮ ವಿದ್ಯಾರ್ಥಿಗಳಾದ ನೀವು ನಿಮ್ಮ ಕಠಿಣ ಶ್ರಮದಿಂದಲೂ ಮತ್ತು ನಮ್ಮ ತರಬೇತುದಾರರು ನೀಡುತ್ತಿರುವ ಉತ್ತಮ ತರಬೇತಿಯಿಂದಲೂ ಉತ್ತಮ ಅಂಕ ಪಡೆದು ತೇರ್ಗಡೆಯಾಗಿರುವುದು ಹೆಮ್ಮೆಯ ಸಂಗತಿ, ಮುಂದಿನ ಹಂತಗಳಲ್ಲೂ ಇದೇ ರೀತಿಯಲ್ಲಿ ಶ್ರದ್ಧೆಯಿಂದ ತೇರ್ಗಡೆ ಹೊಂದುವಂತಾಗಲಿ ಹಾಗೂ ನಮ್ಮ ಸಂಸ್ಥೆಯಲ್ಲಿನ ಸದಾವಕಾಶ ಬಳಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳುವಂತಾಗಲಿ ಎಂದು ಆಶಿಸಿ ಅಭಿನಂದಿಸಿದರು.
ಸಿಎ ಇಂಟರ್ ನಲ್ಲಿ ಆಲ್ ಇಂಡಿಯಾ 3ನೇ ರ್ಯಾಂಕ್, ಹಾಗೂ ಸಿಎ ಪೌಂಡೇಷನ್ ನಲ್ಲಿ ಆಲ್ ಇಂಡಿಯಾ 13ನೇ ರ್ಯಾಂಕ್ ಹಾಗೂ ಸಿಎ ಫೈನಲ್ ನಲ್ಲಿ ಆಲ್ ಇಂಡಿಯಾ 39ನೇ ರ್ಯಾಂಕ್ ಪಡೆದ ಸಿ.ಎ.ಚಿನ್ಮಯ್ ಹೆಗಡೆ ಅವರು ಸಿಎ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು ಮತ್ತು ಸಿಎಸ್ ಪೌಂಡೇಷನ್ ನಲ್ಲಿ ಆಲ್ ಇಂಡಿಯಾ 20ನೇ ರ್ಯಾಂಕ್ ಪಡೆದ ಸಿ.ಎಸ್.ರಾಜೇಶ್ ಅವರು ಸಿಎಸ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಪಿಗ್ ಮೇಲಿಯನ್ ರಿಮೇಜನ್ಸ್ ವೆಲ್ತ್ ಮ್ಯಾನೇಜ್ ಮೆಂಟ್ ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ವರನ್ ರಮಣನ್ ಅವರು ಎಲ್ಲಾ ಬಿಕಾಂ ವಿದ್ಯಾರ್ಥಿಗಳನ್ನು ಕುರಿತು ಕೆರಿಯರ್ ಆಪರ್ಚುನಿಟಿಸ್ ಇನ್ ಇನ್ ವೆಸ್ಟ್ ಮೆಂಟ್ ಬ್ಯಾಂಕಿಂಗ್ ವಿಷಯ ಕಾರ್ಯಗಾರ ನಡೆಸಿಕೊಟ್ಟರು, ಇದೇ ಸಂದರ್ಭದಲ್ಲಿ ನೂತನವಾಗಿ ಸಿಎ ಇಂಟರ್ ಮೀಡಿಯೇಟ್ ಮತ್ತು ಸಿಎಸ್ ಎಕ್ಸಿಕ್ಯೂಟೀವ್ ನ ತರಬೇತಿ ತರಗತಿಗಳನ್ನು ಪ್ರಾರಂಭಿಸಲು ಚಾಲನೆ ನೀಡಲಾಯಿತು, ಆಸಕ್ತ ವಿದ್ಯಾರ್ಥಿಗಳು 7022882310 ಗೆ ಸಂಪರ್ಕಿಸಬಹುದು, ಈ ಸಂದರ್ಭದಲ್ಲಿ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಎಸ್.ಪ್ರೇಮ್ ಇತರರು ಇದ್ದರು.
Comments are closed.