ಜಿಲ್ಲಾಧಿಕಾರಿ ಭೇಟಿ-ಪ್ರಿನ್ಸಿಪಾಲ್, ವಾರ್ಡನ್ ಅಮಾನತಿಗೆ ಆದೇಶ

ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ಸಾವು

3

Get real time updates directly on you device, subscribe now.


ಕೊರಟಗೆರೆ: ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿ ಕೊಠಡಿಯಲ್ಲಿ ಸಾವನ್ನಪ್ಪಿದ್ದು, ಶಾಲಾ ಪ್ರಿನ್ಸಿಪಾಲ್, ವಾರ್ಡನ್ ಹಾಗೂ ಶಿಕ್ಷಕರ ದಿವ್ಯ ನಿರ್ಲಕ್ಷದಿಂದ ವಿದ್ಯಾರ್ಥಿ ಸಾವಿಗೆ ಕಾರಣವಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೊರಟಗೆರೆ ತಾಲೂಕಿನ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಬಜ್ಜನಹಳ್ಳಿಯಲ್ಲಿರುವ ಏಕಲವ್ಯ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಅಭಿಷೇಕ್(13) ವಸತಿ ನಿಲಯದ ಕೊಠಡಿಯಲ್ಲಿ ಮೃತಪಟ್ಟಿದ್ದಾನೆ, ಕೊರಟಗೆರೆ ತಾಲೂಕಿನ ಕ್ಯಾಮೆನಹಳ್ಳಿ ಗ್ರಾಪಂ ವ್ಯಾಪ್ತಿಯ ಶಕುನತಿಮ್ಮನಹಳ್ಳಿ ಗ್ರಾಮದ ರಮೇಶ್ ಮತ್ತು ಮಂಜುಳಾ ದಂಪತಿಯ ಪುತ್ರ ಅಭಿಷೇಕ್.

ದೀಪಾವಳಿ ಹಬ್ಬಕ್ಕೆ ಮನೆಗೆ ತೆರಳಿದ ವಿದ್ಯಾರ್ಥಿ ಸೋಮವಾರ ಶಾಲೆಗೆ ಬಂದಿದ್ದಾನೆ, ಮಧ್ಯಾಹ್ನದವರೆಗೆ ತರಗತಿಯಲ್ಲಿದ್ದು ಊಟದ ಸಮಯದಲ್ಲಿ ಸುಸ್ತು ಎಂದು ವಸತಿ ನಿಲಯದ ಕೊಠಡಿಗೆ ಹೋಗಿ ಮಲಗಿದ್ದಾನೆ, ಸ್ವಲ್ಪ ಹೊತ್ತಿನ ಬಳಿಕ ಸಹಪಾಠಿಗಳು ವಿಚಾರಿಸಿದಾಗ ಸುಸ್ತಾಗುತ್ತಿದೆ ಮಲಗುತ್ತೇನೆ ಎಂದು ಎದ್ದೇಳದೆ ಮಲಗಿದ್ದ ಅಭಿಷೇಕ್ ನಂತರ ಎದ್ದೇಳಲೇ ಇಲ್ಲ.

ಮೂಗು, ಬಾಯಲ್ಲಿ ರಕ್ತ: ಸ್ವಲ್ಪ ಹೊತ್ತಿನ ಬಳಿಕ ಸ್ನೇಹಿತರು ಕೊಠಡಿಗೆ ಬಂದು ಅಭಿಷೇಕ್ ನನ್ನು ನೋಡಿದಾಗ ಆತನ ಮೂಗು ಮತ್ತು ಬಾಯಲ್ಲಿ ರಕ್ತ ಮತ್ತು ನೊರೆ ಬರುತ್ತಿತ್ತು, ಕೂಡಲೇ ಎತ್ತಿಕೊಂಡು ನರ್ಸ್ ಬಳಿ ಕರೆದೊಯ್ದಾಗ ಮೃತಪಟ್ಟಿರೋದು ಗೊತ್ತಾಗಿದೆ, ನಂತರ ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರ ಪರೀಕ್ಷೆ ವೇಳೆ ಮೃತಪಟ್ಟಿರುವುದು ದೃಢವಾಗಿದೆ.

Get real time updates directly on you device, subscribe now.

Comments are closed.

error: Content is protected !!