ಮದುವೆ ನಿಶ್ಚಿತಾರ್ಥ ಚಿನ್ನಾಭರಣ ಕಾಣೆ

14

Get real time updates directly on you device, subscribe now.


ಕುಣಿಗಲ್: ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಚಿನ್ನ, ಬೆಳ್ಳಿ ಆಭರಣ ಕಾಣೆಯಾಗಿದ್ದು, ಇದಕ್ಕೆ ಕಾರಣ ಮೇಕಪ್ ಮಾಡಲು ಆಗಮಿಸಿದ್ದವರ ಮೇಲೆ ಅನುಮಾನದ ಇದೆ ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಪಟ್ಟಣದ ಕೆಆರ್ ಎಸ್ ಅಗ್ರಹಾರದ ದಯಾನಂದ ಎಂಬುವರ ಮನೆಯಲ್ಲಿ ಅವರ ಎರಡನೆ ಮಗಳ ನಿಶ್ವಿತಾರ್ಥ ಕಾರ್ಯಕ್ರಮ ನ.2ರಂದು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮಕ್ಕೆ ಮೇಕಪ್ ಮಾಡಲು ಎರಡನೆ ಮಗಳ ಸ್ನೇಹಿತೆ ಬೆಂಗಳೂರಿನ ಗಿರಿನಗರದಲ್ಲಿನ ಮೇಕಪ್ ಮಾಡುವಾಕೆ ಇನ್ ಸ್ಟಾ ಗ್ರಾಂನಲ್ಲಿ ಖ್ಯಾತಿ ಗಳಿಸಿದ್ದು ಅವರಿಂದ ಮಾಡಿಸಲು ಸಲಹೆ ನೀಡಿದ ಮೇರೆಗೆ ಅವರನ್ನು ಕರೆಯಿಸಿ ಮೇಕಪ್ ಮಾಡಿಸಿದ್ದು, ಕಾರ್ಯಕ್ರಮದಲ್ಲಿ ಮೇಕಪ್ ಮಾಡುವಾಗ ಮನೆಯ ಎರಡನೆ ಅಂತಸ್ತಿನಲ್ಲಿ ಲಾಕರ್ ನಲ್ಲಿ ಚಿನ್ನ, ಬೆಳ್ಳಿ ಆಭರಣ ಇದ್ದು, ಶಾಸ್ತ್ರಕ್ಕೆ ಕೆಲವನ್ನು ತೆಗೆದ ವೇಳೆ ಮೇಕಪ್ ಮಾಡುವವರು ಸಹ ನೋಡಿದ್ದರು ಎನ್ನಲಾಗಿದೆ. ನಿಶ್ಚಿತಾರ್ಥ ಮೇಕಪ್ ಮುಗಿಸಿದ ನಂತರ ಮೇಕಪ್ ಮಾಡಲು ಬಂದಿದ್ದಾಕೆ ಬೆಂಗಳೂರಿಗೆ ತೆರಳಿದ್ದು, ನ.7 ರಂದು ಮನೆಯವರು ಮದುವೆ ಕಾರ್ಯಕ್ರಮಕ್ಕೆ ಹೋಗಲು ಎರಡನೆ ಅಂತಸ್ಥಿನ ಕೊಠಡಿಗೆ ಬಂದು ಲಾಕರ್ ನಲ್ಲಿ ವಡವೆ ನೋಡಿದಾಗ ವಡವೆ ಕಾಣೆಯಾಗಿ ಬರಿ ಬಾಕ್ಸ್ ಇದ್ದವು, ಘಟನೆ ಸಂಬಂಧ ಎಲ್ಲಾ ನೆಂಟರಿಷ್ಟರ ವಿಚಾರಿಸಿದ್ದು, ಈ ವೇಳೆ ನಿಶ್ವಿತಾರ್ಥದ ದಿನದಂದು ಮೇಕಪ್ ಮಾಡಲು ಬಂದಿದ್ದ ಮೋನಿಶಾ ಎಂಬಾಕೆ ರೂಮಿನಲ್ಲೆ ಕೆಲಹೊತ್ತು ಇದ್ದರು ಎಂಬುದು ಕಂಡು ಬಂದಿದೆ.

ವಡವೆ ಕಾಣೆಯಾಗಲು ಮೊನಿಶಾರ ಮೇಲೆ ಅನುಮಾನ ಇದೆ ಎಂದು ಆರೋಪಿಸಿ ದಯಾನಂದ್ ಮನೆಯಲ್ಲಿದ್ದ 50 ಗ್ರಾಂ ಎರಡು ಚಿನ್ನದ ಬಳೆ, 20 ಗ್ರಾಂ ಚೈನ್, 12 ಗ್ರಾಂ ಗಣೇಶ ಪೆಂಡೆಂಟ್ ಚೈನು, ಹವಳ ಮುತ್ತಿನ 35 ಗ್ರಾಂ ಚೈನು, 15 ಗ್ರಾಂ ನೆಕ್ಲೇಸ್ ಸೇರಿದಂತೆ ಬೆಳ್ಳಿ ಆಭರಣಗಳು ಕಳುವಾಗಿದ್ದು ಕಳುವಾಗಿರುವ ಆಭರಣಗಳನ್ನು ಪತ್ತೆ ಮಾಡಿಕೊಡಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!