ವಿದ್ಯಾರ್ಥಿ ಸಾವು ಪ್ರಕರಣ- ಶಿಕ್ಷಕರಿಗೆ ಪರಂ ಕ್ಲಾಸ್

ವಿದ್ಯಾರ್ಥಿ ನಿಲಯಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸೂಚನೆ

16

Get real time updates directly on you device, subscribe now.


ಕೊರಟಗೆರೆ: ತಾಲ್ಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜ್ಜನಹಳ್ಳಿಯ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ವಸತಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದರು, ಅಲ್ಲಿನ ಅವ್ಯವಸ್ಥೆಯ ದರ್ಶನ ಪಡೆದ ಪರಮೇಶ್ವರ್ ಶಿಕ್ಷಕರು, ವಾರ್ಡನ್ ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಹೂಲೀಕುಂಟೆ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ರೆಡ್ಡಿಕಟ್ಟೆಯ ಮೊರಾರ್ಜಿ ದೇಸಾಂಯಿ ವಸತಿ ಶಾಲೆ, ಬಜ್ಜನಹಳ್ಳಿ ಏಕಲವ್ಯ ವಸತಿ ಶಾಲೆ ಹಾಗೂ ಇತ್ತೀಚಿಗೆ ಮೃತಮಟ್ಟ ವಿದ್ಯಾರ್ಥಿಯ ಶಕುನಿ ತಿಮ್ಮನಹಳ್ಳಿಯ ನಿವಾಸಕ್ಕೆ ಗುರುವಾರ ಭೇಟಿ ನೀಡಿದರು.
3 ಸಾವಿರ ಕಾಮಗಾರಿಗೆ ಅನುಮೋದನೆ: ತುಮಕೂರು ಜಿಲ್ಲೆಯಲ್ಲಿ 214 ಕೋಟಿ ರೂ ವೆಚ್ಚದ 3811 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಗೃಹಗ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!