ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿಗಳಿಬ್ಬರ ಸಾವು

24

Get real time updates directly on you device, subscribe now.


ತಿಪಟೂರು: ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದ 4ನೇತರಗತಿ ವಿದ್ಯಾರ್ಥಿ ಮನೋಹರ್ (10) ಹಾಗೂ 2ನೇ ತರಗತಿ ವಿದ್ಯಾರ್ಥಿ ಯದುವೀರ್ (8) ಗ್ರಾಮದ ಪಕ್ಕದಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ಕಾಮಗಾರಿಯ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪೋಷಕರ ಆಕ್ರಂದನ: ಮಕ್ಕಳನ್ನು ಕಳೆದುಕೊಂಡ ತಂದೆ, ತಾಯಿ, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು, ನಮಗೆ ಯಾವುದೇ ಸಂಧಾನ, ಹಣ ನೀಡುವುದು ಬೇಕಿಲ್ಲ, ನಮ್ಮ ಮಕ್ಕಳನ್ನು ಬದುಕಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಗ್ರಾಮಸ್ಥರ ಆಕ್ರೋಶ: ಈ ಕಾಮಗಾರಿ ಕೂಡಲೇ ನಿಲ್ಲಿಸಬೇಕು, ಈಗಾಗಲೇ 5 ಸಾವು ನಡೆದರು, ಸಂಬಂಧಪಟ್ಟ ಇಲಾಖೆಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ, ಸುಮಾರು 40 ಅಡಿ ಆಳದಲ್ಲಿ ಕಾಮಗಾರಿ ನಡೆಯುತ್ತಿದೆ, ರಾಷ್ಟ್ರೀಯ ಹೆದ್ದಾರಿ ಮೇಲ್ಭಾಗದಲ್ಲಿ ಹಾದು ಹೋದರೆ ಕೆಳಭಾಗದಲ್ಲಿ ನಗರದಿಂದ ಗ್ರಾಮೀಣ ಭಾಗಕ್ಕೆ ಹಾದು ಹೋಗುವ ಮುಖ್ಯ ದ್ವಾರದಲ್ಲಿ ಬೈಪಾಸ್ ಹತ್ತಿರದಲ್ಲಿ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ, ಅಲ್ಲದೆ 4 ರಿಂದ 5 ಅಡಿ ಆಳದಲ್ಲಿ ಗುಂಡಿ ನಿರ್ಮಿಸಿದ್ದಾರೆ, ಹತ್ತಿರದಲ್ಲಿಯೇ ಸರ್ಕಾರಿ ಶಾಲೆ ಇರುವುದರಿಂದ ಮಕ್ಕಳು ಶಾಲೆ ಬಿಟ್ಟ ನಂತರ ನೋಡುವ ಕಾತುರದಲ್ಲಿ ಓಡಾಡುತ್ತಾರೆ, ಬಾಳಿ ಬದುಕ ಬೇಕಾದ ಮಕ್ಕಳ ಸಾವಿಗೆ ಎತ್ತಿನಹೊಳೆ ಕಾಮಗಾರಿಯೇ ಕಾರಣ ಎಂದು ದೂರಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವವರೆಗೂ ಅಂತಿಮ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಹಠ ಹಿಡಿದರು, ಸ್ಥಳಕ್ಕೆ ಡಿವೈಎಸ್ ಪಿ ವಿನಾಯಕ ಶಟೇಗೆರ ಆಗಮಿಸಿ ಯಾವುದೇ ಗಲಾಟೆ ಗದ್ದಲಗಳಿಗೆ ಅವಕಾಶ ನೀಡದೆ ಸೂಕ್ತ ಪೊಲೀಸ್ ಬಂದು ಬಸ್ತ್ ಮಾಡಿದ್ದರು, ಶಾಸಕ ಷಡಕ್ಷರಿ, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ, ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಮಕ್ಕಳ ಶವಗಳನ್ನು ಹೊರ ತೆಗೆದರು.

ಸ್ಥಳಕ್ಕೆ ಎಸ್ ಪಿ ದೌಡು: ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಮಾತನಾಡಿ, ಗುರುವಾರ ಸಂಜೆ ಮಕ್ಕಳು ಶಾಲೆಗೆ ಹೋಗಿ ವಾಪಸ್ ಬಂದಿರದ ಕಾರಣ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ಕಂಪ್ಲೇಟ್ ನೀಡಿರುತ್ತಾರೆ, ಪ್ರಕರಣ ದಾಖಲಿಸಿಕೊಂಡಿದ್ದು ನಂತರ ಬೆಳಗ್ಗೆ ಮಕ್ಕಳು ಶವವಾಗಿ ಸಿಕ್ಕಿರುವುದು ಮಾಹಿತಿ ಸಿಕ್ಕಿರುತ್ತದೆ, ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಸಾವಿನ ಬಗ್ಗೆ ಶಂಕೆ
ಮಕ್ಕಳು ನೀರಿಗೆ ಬಿದ್ದಿದ್ದರೆ ಕೈ ಕಾಲು ಸೆಟೆದು ಕೊಳ್ಳುತ್ತಿದ್ದವು, ಹೊಟ್ಟೆ ಊದಿಕೊಳ್ಳುತ್ತಿತ್ತು, ಆದರೆ ಎರಡು ಮಕ್ಕಳು ಮಲಗಿದಂತೆ ಕಾಣುತ್ತವೆ, ಕಾಮಗಾರಿಯಲ್ಲಿ ಕಬ್ಬಿಣದ ಪೀಸುಗಳು ಬಿದ್ದಿರುತ್ತವೆ, ಇದನ್ನು ತೆಗೆದುಕೊಂಡು, ಕಬ್ಬಿಣ ಕೊಳ್ಳುವವರಿಗೆ ಮಾರುವ ಆಸೆಯಿಂದ ಮಕ್ಕಳು ಇಲ್ಲಿ ಬರುತ್ತಾರೆ, ಕಾಮಗಾರಿಯವರು ಎದುರಿಸಿ ಅಥವಾ ಓಡಿಸಿಕೊಂಡು ಹೋಗುವಾಗ ನೀರಿಲ್ಲದ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿರುತ್ತಾರೆ, ನಂತರ ನೀರಿನ ಗುಂಡಿಗೆ ಹಾಕಿರಬಹುದು, ಸಾವಿನ ಬಗ್ಗೆ ಶಂಕೆ ಇದ್ದು ತನಿಖೆ ನಡೆಸಿದರೆ ಸತ್ಯಾಂಶ ತಿಳಿಯುತ್ತದೆ ಸ್ಥಳೀಯ ವ್ಯಕ್ತಿ ನಾಗರಾಜು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!