ಗ್ರಾಮೀಣ ಪರ್ತಕರ್ತರ ಬದುಕಿಗೆ ನೆಲೆಯಿಲ್ಲ

ದಿ.ಪತ್ರಕರ್ತ ಉಮಾಶಂಕರ್ ಗೆ ಶ್ರದ್ಧಾಂಜಲಿ ಸಲ್ಲಿಕೆ

7

Get real time updates directly on you device, subscribe now.


ಕೊರಟಗೆರೆ: ಕ್ರೈಂ ಮತ್ತು ಇತರೆ ವಾಹಿನಿಯಲ್ಲಿ ವರದಿಗಾರರಾಗಿ ವಡ್ಡಗೆರೆ ಉಮಾಶಂಕರ್ ಅವರು ಮಾಧ್ಯಮ ಕ್ಷೇತ್ರದಲ್ಲಿ ಜನಪರವಾದ ಸೇವೆ ಸಲ್ಲಿಸಿದ ವ್ಯಕ್ತಿ, ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ನಿಧನರಾಗಿದ್ದು ಶನಿವಾರ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘವು ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸೂಚಿಸಿದೆ.

ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ತಾ.ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ, ಗ್ರಾಮೀಣ ಪತ್ರಕರ್ತರ ಬದುಕು ನೆಲೆಯಿಲ್ಲದ ಜೀವನ, ಇಂದಿಗೂ ಎಷ್ಟೋ ಪತ್ರಕರ್ತರ ಕುಟುಂಬವು ಕಷ್ಟದ ದಿನಗಳನ್ನು ಎದುರಿಸುತ್ತಾ ಜೀವನ ಸಾಗಿಸುತ್ತಿವೆ ಎಂದು ಹೇಳಿದರು.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕನ್ನಡಪ್ರಭ ಪತ್ರಿಕೆಯ ಹಿರಿಯ ವರದಿಗಾರ ಜಿ.ಎಲ್.ಸುರೇಶ್ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಫಲಿಸದೆ ನಿಧನರಾದರು, ತಡರಾತ್ರಿ ಮತ್ತೋರ್ವ ಹಿರಿಯ ವರದಿಗಾರ ವಡ್ಡಗೆರೆ ಉಮಾಶಂಕರ್ ಸಹ ಇದೇ ರೀತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ, ಇಬ್ಬರೂ ಹಿರಿಯ ಪತ್ರಕರ್ತರ ನಿಧನದಿಂದ ಪತ್ರಕರ್ತರ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ಮೃತರ ಕುಟುಂಬಕ್ಕೆ ದೇವರು ದುಃಖ ಬರಿಸುವ ಶಕ್ತಿ ನೀಡಲಿ, ಸರ್ಕಾರ ಪತ್ರಕರ್ತರ ಆರೋಗ್ಯದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ: ನಿಧನರಾದ ಹಿರಿಯ ವರದಿಗಾರ ವಡ್ಡಗೆರೆ ಉಮಾಶಂಕರ್ ಅವರ ಸ್ವಗ್ರಾಮವಾದ ವಡ್ಡಗೆರೆ ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು, ಜನಪ್ರತಿನಿಧಿಗಳು, ಸ್ನೇಹಿತರು, ಬಂಧು ಬಳಗ, ಹಿತೈಶಿಗಳು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪರ್ತಕರ್ತರ ಸಂಘದ ನಿರ್ದೇಶಕ ಎನ್.ಮೂರ್ತಿ, ಉಪಾಧ್ಯಕ್ಷ ಎಚ್.ಎನ್.ನಾಗರಾಜು, ಹಿರಿಯ ಪತ್ರಕರ್ತ ರಮೇಶ್, ರಾಘವೇಂದ್ರ.ಡಿ.ಎಂ, ದೇವರಾಜ್.ಕೆ.ಎನ್, ಲೋಕೇಶ್, ಹರೀಶ್ ಬಾಬು, ನರಸಿಂಹ ಮೂರ್ತಿ, ವಿಜಯ್ ಶಂಕರ್, ಮಂಜುಸ್ವಾಮಿ, ಲಕ್ಷ್ಮೀಕಾಂತ, ಸಿದ್ದರಾಜು, ಲಕ್ಷ್ಮೀಶ್, ಸತೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!