ತುಮಕೂರು: ವಿಶ್ವಮಟ್ಟದಲ್ಲಿ ಭಾರತದ ವೈದ್ಯರಿಗೆ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ವಿದೇಶಿ ವಿಶ್ವ ವಿದ್ಯಾಲಯಗಳೊಂದಿಗೆ ತಂತ್ರಜ್ಞಾನ ಅಳವಡಿಕೆ, ಪರಸ್ಪರ ಶೈಕ್ಷಣಿಕ ಅಧ್ಯಯನ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಜಾಗತಿಕ ಪೈಪೋಟಿ ಎದರಿಸಲು ಸನ್ನದ್ಧರಾಗುವುದು ಇಂದಿನ ಅಗತ್ಯವಾಗಿದೆ, ಈ ನಿಟ್ಟಿನಲ್ಲಿ ಸಾಹೇ ವಿವಿ ಕೂಡ ಅಂತಾರ್ರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಸಾಹೇ ವಿವಿಯ ಕುಲಾಧಿಪತಿ ಹಾಗೂ ರಾಜ್ಯ ಗೃಹಮಂತ್ರಿ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ.ಗಂಗಾದರಯ್ಯ ಮೆಮೋರಿಯಲ್ ಹಾಲ್ ನಲ್ಲಿ ಶನಿವಾರ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವ ವಿದ್ಯಾಯಲದ ವ್ಯಾಪ್ತಿಯ ಶ್ರೀಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡೆಂಟಲ್ ಕಾಲೇಜು ಹಾಗೂ ನೆಲಮಂಗಲದ ಶ್ರೀಸಿದ್ಧಾರ್ಥ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ನ 2024- 25ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ವೈಟ್ ಕೋಟ್ ಧಾರಣೆ ಮತ್ತು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಈ ಹಿಂದೆ ಇದ್ದ ಕಲಿಕಾ ಪದ್ಧತಿ ಹಾಗೂ ಇಂದಿನ ಕಲಿಕಾ ಪದ್ಧತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು ಆಧುನಿಕ ತಂತ್ರಜ್ಞಾನದೊಂದಿಗೆ ಕಲಿಕೆ ಸರಳವಾಗಿದೆ, ಅದೇ ರೀತಿ ಪೈಪೋಟಿ ಎದುರಾಗಿದೆ, ವಿಶ್ವ ಮಟ್ಟದಲ್ಲಿ ಫ್ರೋರಿಡಾ ವಿವಿ, ಆವಲಾನ್ ವಿವಿಗಳೊಂದಿಗೆ ವಿದ್ಯಾರ್ಥಿ, ಪ್ರಾಧ್ಯಾಪಕರ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇಂದು ಸಿದ್ದಾರ್ಥ ಸಂಸ್ಥೆ ತನ್ನ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಾಧ್ಯವಾಗಿಸಿದೆ, ಇದು ವಿಶ್ವ ಮಟ್ಟದಲ್ಲಿ ತನ್ನ ಉಪಸ್ಥಿತಿಯನ್ನು ಸಾರಿ ಹೇಳಿದೆ ಎಂದರು.
ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಬಿ.ಎಲ್.ಸುಜಾತ ರಾಥೋಡ್ ಮಾತನಾಡಿ, ಸಮಾಜದಲ್ಲಿ ವೈದ್ಯಕೀಯ ವೃತ್ತಿಗೆ ಜವಾಬ್ದಾರಿಯುತ ಸ್ಥಾನವಿದೆ, ಅದರ ಸ್ಥಾನ ಮಾನ ಅರಿತು ಕಾರ್ಯ ನಿರ್ವಹಣೆಗೆ ನಿಮ್ಮ ಮನೋಸ್ಥಿತಿ ಸಜ್ಜುಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿ ಕನ್ನಿಕಾ ಪರಮೇಶ್ವರಿ, ಸಾಹೇ ವಿವಿಯ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝೆಡ್. ಕುರಿಯನ್, ಪರಿಕ್ಷಾಂಗ ನಿಯಂತ್ರಕ ಡಾ.ಜಿ.ಗುರುಶಂಕರ್, ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡಾ.ದಿವಾಕರ್, ಡಾ.ಪ್ರವೀಣ್ ಕುಡುವಾ, ಉಪ ಪ್ರಾಂಶುಪಾಲ ಡಾ.ಪ್ರಭಾಕರ್ ಇತರರು ಹಾಜರಿದ್ದರು.
Comments are closed.