ಪೊಲೀಸ್ ಅಧಿಕಾರಿ, ಪತ್ರಕರ್ತನ ಮೇಲೆ ಹಲ್ಲೆಗೆ ಖಂಡನೆ

6

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬೋವಿ ಸಮುದಾಯದ ಪೂಲೀಸ್ ಅಧಿಕಾರಿ ದೊಡ್ಡಯ್ಯ ಮತ್ತು ಈ ಸಂಜೆ ಜಿಲ್ಲಾ ವರದಿಗಾರ ರಮೇಶ.ವಿ. ಅವರ ಮೇಲೆ ದಿನಾಂಕ ಇದೇ ನವೆಂಬರ್ 05 ರಂದು ವಕೀಲರ ಗುಂಪು ನಡೆಸಿದ ಹಲ್ಲೆಯನ್ನು ಭೋವಿ ಸಮುದಾಯ ಖಂಡಿಸಿದೆ.

ದೊಡ್ಡಯ್ಯನವರು ಕರ್ತವ್ಯ ನಿರಾತರಾಗಿದ್ದಾಗ ಈ ಘಟನೆ ನಡೆದಿದೆ, ವಕೀಲರ ಪ್ರತಿಭಟನೆಯ ಸುದ್ದಿ ಮಾಡಲು ಈಸಂಜೆ ವರದಿಗಾರ ರಮೇಶ್ ತೆರಳಿದ್ದರು, ವಕೀಲರ ಸಂಘದ ಎದುರು ವಕೀಲರ ಗುಂಪು ಯಾರೋ ಸಾರ್ವಜನಿಕರನ್ನು ತಳಿಸುತ್ತಿದೆ, ಹಲ್ಲೆ ನಡೆಸಿತ್ತಿದೆ ಎಂದು ಸುದ್ದಿ ಮಾಡಲು ಇದೊಂದು ಸಾಕ್ಷ್ಯವಾಗುತ್ತದೆ ಎಂದು ವೀಡಿಯೋ ಮಾಡಲು ಪ್ರಾರಂಭ ಮಾಡಿದಾಗ ರಮೇಶ್ ಅವರನ್ನು ಸಹ ಥಳಿಸಿ ಮೊಬೈಲ್ ಕಸಿದುಕೊಂಡಿದ್ದಾರೆ.

ಈ ಘಟನೆ ನಡೆಯುವಾಗ ಸ್ಥಳದಲ್ಲಿ ಮಾಜಿ ಗೃಹರಕ್ಷಕ ದಳದ ಕಮಾಂಡ್ ಆರ್.ಪಾತಣ್ಣ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಸಹ ಇರುತ್ತಾರೆ, ಇವರಿಗೆ ಹಲ್ಲೆ ನಡಿಸಿದವರು ಯಾರೆಂದು ತಿಳಿದಿರುತ್ತದೆ, ಪೊಲೀಸ್ ಅಧಿಕಾರಿ ಮೇಲೆ ನಡೆಯುತ್ತಿರುವ ಹಲ್ಲೆ ಸಾಕ್ಷಿಯಾಗುತ್ತದೆ, ಯಾರು ವೀಡಿಯೋ ಮಾಡಬಾರದು ಎಂಬ ಉದ್ದೇಶ ಇಟ್ಟುಕೊಂಡೆ ಪತ್ರಕರ್ತ ರಮೇಶ್ ಮೇಲೆ ಹಲ್ಲೆ ನಡೆಸಿದ ಗುಂಪು ಮೊಬೈಲ್ ನ್ನು ಪಾತಣ್ಣ ಅವರಿಗೆ ನೀಡಿರುತ್ತಾರೆ, ಇಪ್ಪತ್ತು ನಿಮಿಷಗಳ ಬಳಿಕ ಮೊಬೈಲ್ ವಾಪಸ್ ನೀಡಿರುತ್ತಾರೆ, ದೊಡ್ಡಯ್ಯ ಮತ್ತು ರಮೇಶ ಇಬ್ಬರು ಸಹ ಭೋವಿ ಸಮುದಾಯದವರಾಗಿದ್ದು, ಇವರ ಮೇಲೆ ಹಲ್ಲೆ ನಡೆಸಿದ ವಕೀಲರ ಗುಂಪಿನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಭೋವಿ ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್, ವಿಶ್ವನಾಥ್, ಗಿರಿಯಪ್ಪ, ವೆಂಕಟಸ್ವಾಮಿ, ಕಾಶಿನಾಥ್, ದಲಿತ ಸಂಘಟನೆಗಳ ಮುಖಂಡರಾದ ಜೆಸಿಬಿ ವೆಂಕಟೇಶ್, ಡ್ಯಾಗೇರಹಳ್ಳಿ ವಿರುಪಾಕ್ಷಪ್ಪ, ಹಂದ್ರಹಳ್ ನಾಗಭೂಷಣ್, ಮೋಹನ್ ಕುಮಾರ್, ದೊಡ್ಡ ರಾಮಣ್ಣ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!