ಕುಣಿಗಲ್: ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಡಿಯೂರು ಹೋಬಳಿಯ ದೊಡ್ಡ ಮಧುರೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮೀಣ ಸೊಗಡನ್ನು ನಮ್ಮ ವಿದ್ಯಾರ್ಥಿಗಳಿಗೆ ಉಣಬಡಿಸಬೇಕು ಎಂಬ ಉದ್ದೇಶದಿಂದ ಈ ಬಾರಿ ಗ್ರಾಮೀಣ ಪ್ರದೇಶದ ದೊಡ್ಡ ಮಧುರೆ ಗ್ರಾಮದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳಲಾಗಿದೆ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರುವ ಸಲುವಾಗಿ ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ, ಶೈಕ್ಷಣಿಕ ಚಟುವಟಿಕೆಯ ಜೊತೆಯಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಹೆಚ್ಚು ಕ್ರಿಯಾಶೀಲವಾಗಿರುವಂತೆ ಇಡಲು ಸಹಕಾರಿಯಾಗಿದೆ, ಗ್ರಾಮೀಣ ಪ್ರದೇಶದ ಶಾಲೆಗಳು ಸಮಗ್ರ ಅಭಿವೃದ್ಧಿಗೆ ಅಲ್ಲಿನ ಜನತೆ ವಿಶೇಷವಾಗಿ ಯುವಕರ ಇಚ್ಛಾಶಕ್ತಿ ಮುಖ್ಯ ಎಂದರು.
ತಾಲೂಕಿನ ವಿವಿಧ ಹೋಬಳಿಗಳಿಂದ ಆಗಮಿಸಿದ್ದ ಶಾಲಾ ಮಕ್ಕಳಿಂದ ಚಂಡೆ ವಾದ್ಯ, ಕೋಲಾಟ, ಗೀಗಿ ಪದ, ಸೋಬಾನೆ ಪದ, ಜಾನಪದ ಗೀತೆ ಗಾಯನ, ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆ, ಖವ್ವಾಲಿ, ಚಿತ್ರ ಕಲೆ, ಮಿಮಿಕ್ರಿ, ಕ್ಲೇ ಮಾಡೆಲಿಂಗ್, ಡೊಳ್ಳು ಕುಣಿತ ಮತ್ತಿತರ ಆಕರ್ಷಕ ಪ್ರತಿಭೆ ಅನಾವರಣ ನಡೆದವು.
ಸಮಾರಂಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ರಮೇಶ್, ಗೌರಮ್ಮ, ದಾನಿಗಳಾದ ಸತ್ಯ ನಾರಾಯಣ ರಾವ್, ದೊಡ್ಡಮಧುರೆ ನಂಜಪ್ಪ, ಪ್ರಕಾಶ್, ಕರವೇ ಗಂಗಾಧರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರಾಜು, ಬೋರೇಗೌಡ, ಪದಾಧಿಕಾರಿಗಳಾದ ಕಾಳೇಗೌಡ, ಮುಖ್ಯ ಶಿಕ್ಷಕಿ ಶಶಿಕಲಾ, ಅಮರನಾಥ್, ಬಿ.ಜೀವಂದರ್ ಕುಮಾರ್, ಉಮೇಶ, ಲೀಲಾವತಿ, ಹನುಮಂತರಾಯಪ್ಪ, ಮಾರುತೇಶ್, ವಿಶ್ವಪ್ರಕಾಶ್, ಮೈತ್ರಿ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತಾಲೂಕು ದೈಹಿಕ ಪರಿವೀಕ್ಷಕ ಗೋಪಾಲಕೃಷ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಘು, ಇಸಿಓ ಸೋಮಶೇಖರ್ , ಬಿ ಆರ್ ಪಿ, ಸಿಆರ್ ಪಿಗಳು ಮತ್ತಿತರರು ಹಾಜರಿದ್ದರು.
Comments are closed.