ಕೌಟುಂಬಿಕ ಕಲಹ- ಮಗು ಜೊತೆ ತಾಯಿ ಆತ್ಮಹತ್ಯೆ

19

Get real time updates directly on you device, subscribe now.


ತುರುವೇಕೆರೆ: ತಾಲ್ಲುಕಿನ ಮೇಲಿನವಳಗೆರ ಹಳ್ಳಿಯ ಶಶಿಕಲಾ (53) ಮತ್ತು ಐದು ವರ್ಷದ ಗಂಡು ಮಗು ಪಟ್ಟಣದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮೂರು ದಿನಗಳ ನಂತರ ಬೆಳಕಿಗೆ ಬಂದಿದೆ.
ಚಿಕ್ಕನಾಯಕನ ಹಳ್ಳಿ ಮೂಲದವರಾದ ಮೃತ ದುರ್ದೈವಿ ಶಶಿಕಲಾ ತಾಲೂಕಿನ ಮೇಲಿನವಳಗೆರ ಹಳ್ಳಿಯ ಬಸವರಾಜು ಅವರನ್ನು ಮದುಮೆಯಾಗಿದ್ದರು, ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು, ನಿತ್ಯ ಪತ್ನಿ ಜೊತೆ ಕಲಹ, ಕಿರುಕುಳ ನಡೆಯುತ್ತಿದ್ದರಿಂದ ಬೇಸತ್ತು ಶಶಿಕಲಾ ಆತ್ಮಹತ್ಯೆ ನಿರ್ಧಾರ ಕೈಗೊಂಡು ಒಬ್ಬನೇ ಮಗನಾದ ಗಂಡು ಮಗುವನ್ನು ಜೊತೆಗೂಡಿ ಶನಿವಾರ ಸಂಜೆಯ ಸಮಯದಲ್ಲಿ ಪಟ್ಟಣದ ಕೆರೆಗೆ ಹಾರಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ಶಶಿಕಲಾ ಸಹೋದರ ಮೂರು ದಿನಗಳಿಂದ ತನ್ನ ತಂಗಿ ಕಾಣೆಯಾಗಿದ್ದರಿಂದ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ 9 ರ ಸಮಯದಲ್ಲಿ ಕೆರೆಯಲ್ಲಿ ತಾಯಿ ಮಗನ ಮೃತದೇಹ ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಇಲಾಖೆ ಧಾವಿಸಿ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ, ತನಿಖೆ ನಡೆದು ಕಾಣೆಯಾಗಿರುವ ಶಶಿಕಲಾ ಮತ್ತು ಗಂಡು ಮಗುವೆಂದು ತಿಳಿದು ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೆಂದು ಇಲಾಖೆ ಮಾಹಿತಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!