ಶ್ರೀಶೆಟ್ಟಿಹಳ್ಳಿ ಮಾರಮ್ಮನ ತೆಪ್ಪದ ಉತ್ಸವ

6

Get real time updates directly on you device, subscribe now.


ಮಧುಗಿರಿ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಶೆಟ್ಟಿಹಳ್ಳಿ ಮಾರಮ್ಮ ದೇವರ ತೆಪ್ಪದ ಉತ್ಸವ ಮಂಗಳವಾರ ಮರಬಳ್ಳಿ ಕೆರೆಯಲ್ಲಿ ಯಶಸ್ವಿಯಾಗಿ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಶೆಟ್ಟಿಹಳ್ಳಿಯ ಮರಬಹಳ್ಳಿ ಕೆರೆ ತುಂಬಿದರೆ ಶೆಟ್ಟಿಹಳ್ಳಿ ಮಾರಮ್ಮನ ತೆಪ್ಪೋತ್ಸವ ನಡೆಯುವುದು ವಾಡಿಕೆ, ಅದರಂತೆ 2020 ರಲ್ಲಿ ಈ ಕೆರೆ ತುಂಬಿತ್ತು, 4 ವರ್ಷ ನಂತರ ಕೆರೆ ತುಂಬಿ ಕೋಡಿ ಹರಿದಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಈ ತೆಪ್ಪೋತ್ಸವ ನಡೆಸಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮರಬಳ್ಳಿ, ಶೆಟ್ಟಿಹಳ್ಳಿ, ಪೆಮ್ಮಯ್ಯನ ಪಾಳ್ಯ, ಮಾಡಗಾನ ಹಟ್ಟಿ, ಸ್ವಾಗೇನಹಳ್ಳಿ, ವೀರಣ್ಣನ ತಾಂಡ, ರಂಗನಹಳ್ಳಿ, ಬಾಲೆನಹಳ್ಳಿ ಗ್ರಾಮಸ್ಥರು ಸೇರಿದ್ದರು.
ತೆಪ್ಪೋತ್ಸವ ನಡೆಯುವುದರಿಂದ ಪ್ರತಿ ವರ್ಷ ಉತ್ತಮ ಮಳೆ ಬೆಳೆ ಜೊತೆಗೆ ಕಾಯಿಲೆ ಮುಕ್ತ ಹಾಗೂ ಲೋಕ ಕಲ್ಯಾಣಾರ್ಥ ವಾಗಿರಲೆಂದು ನಂಬಿಕೆ ಪ್ರತಿಯೊಬ್ಬ ಭಕ್ತರಲ್ಲೂ ಇದೆ.
ನೂರಾರು ಭಕ್ತರು ಜಮಾಯಿಸಿ ಈ ತೆಪ್ಪೋತ್ಸವ ವೀಕ್ಷಿಸಿದರು, ನಂತರ ಪ್ರಸಾದ ವಿತರಣೆ ನಡೆಯಿತು.

Get real time updates directly on you device, subscribe now.

Comments are closed.

error: Content is protected !!