ಗಾಂಧಿನಗರಕ್ಕೆ ಸಿಕ್ತು ವಿದ್ಯುತ್ ಭಾಗ್ಯ

206

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಹಲವಾರು ದಶಕಗಳಿಂದ ವಿದ್ಯುತ್ ದೀಪವನ್ನೇ ಕಾಣದ ದಕ್ಕಲಿಗ ಸಮುದಾಯದ ಮನೆಗಳಿಗೆ ಪುರಸಭೆ ಸದಸ್ಯರ ಹಾಗೂ ಮುಖ್ಯಾಧಿಕಾರಿಗಳ ಇಚ್ಛಾಶಕ್ತಿಯಿಂದ ಸೋಮವಾರ ಟೌನ್ ಲೈನ್ ವಿದ್ಯುತ್ ಸಂಪರ್ಕ ಸಿಕ್ಕಿದ್ದು, 23ನೇ ವಾರ್ಡ್ ಗಾಂಧಿನಗರದಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿದ್ದು ಇಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಪಟ್ಟಣದ 23ನೇ ವಾರ್ಡ್ನಲ್ಲಿರುವ ಗಾಂಧಿನಗರದಲ್ಲಿ ಸುಮಾರು 15 ರಿಂದ 20 ವರ್ಷಗಳಿಂದ ದಕ್ಕಲಿಗ ಸಮುದಾಯದ ಜನರು ವಾಸ ಮಾಡುತ್ತಿದ್ದು, ಇಲ್ಲಿನ ಮನೆ ಹಾಗೂ ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲವಾಗಿತ್ತು, ಹಾವು, ಕ್ರಿಮಿ ಕೀಟಗಳಿಂದ ಇವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೆ ದೊಡ್ಡ ಸಮಸ್ಯೆಯಾಗಿತ್ತು ಹಾಗೂ ಇಲ್ಲಿ ಅನೇಕ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದು ರಾತ್ರಿ ಸಮಯದಲ್ಲಿ ಓದಲು ಬೆಳಕೆ ಇಲ್ಲವಾಗಿತ್ತು, ದಶಕಗಳಿಂದ ತೀವ್ರ ಸಂಕಷ್ಟ ಎದುರಿಸಿದ್ದ ನಿವಾಸಿಗಳಿಗೆ ದಿನದ ಹಲವಾರು ಗಂಟೆಗಳ ಕಾಲ ಹಾಗೂ ರಾತ್ರಿ ಪೂರ್ತಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಸಿಕ್ಕಿದೆ.
23ನೇ ವಾರ್ಡ್ನಲ್ಲಿ ಗೆಲುವು ಸಾಧಿಸಿರುವ ಉಮಾ ಪರಮೇಶ್ ಅವರು ಗೆದ್ದ ದಿನದಿಂದ ಗಾಂಧಿನಗರಕ್ಕೆ ವಿದ್ಯುತ್ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದ್ದರು, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಹಾಗೂ ಬೆಸ್ಕಾಂ ಸಹಕಾರದಿಂದ ಗಾಂಧಿನಗರದ ಎಲ್ಲಾ ಬೀದಿ ಹಾಗೂ ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!