ಸಮರ್ಪಕ ಇ-ಖಾತೆ ವಿತರಣೆಗೆ ಕ್ರಮ ಕೈಗೊಳ್ಳಿ

ಕುಣಿಗಲ್ ಪುರಸಭೆಯಲ್ಲಿ ಇ-ಖಾತೆ ನಿರ್ವಹಣೆ ಕ್ಯಾತೆ

5

Get real time updates directly on you device, subscribe now.


-ಆನಂದ್ ಸಿಂಗ್.ಟಿ.ಹೆಚ್.

ಕುಣಿಗಲ್: ಸರ್ಕಾರದ ದ್ವಂದ್ವ ನಿಲುವಿನ ಜೊತೆಯಲ್ಲಿ ಸ್ಥಳೀಯ ಪುರಸಭೆಯ ಅಸಮರ್ಪಕ ಆಡಳಿತ ವ್ಯವಸ್ಥೆಯಿಂದಾಗಿ ಇ-ಖಾತೆ ನಿರ್ವಹಣೆಯ ಕ್ಯಾತೆಯಿಂದಾಗಿ ಪುರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು, ಪುರಸಭೆ ಸದಸ್ಯರು ಪರದಾಡುವಂತಾಗಿದ್ದು ಸರ್ಕಾರ ಸ್ಪಷ್ಟ ನಿಲುವು ತಳೆದು ಆಸ್ತಿ ಮಾಲೀಕರಿಗೆ ಇ-ಖಾತೆ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕುಣಿಗಲ್ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು 12 ಸಾವಿರ ಆಸ್ತಿಗಳಿದ್ದು ಈ ಪೈಕಿ ಕೇವಲ 1600 ಆಸ್ತಿಗಳಿಗೆ ಇ-ಖಾತೆ ( 1573 ಅಧಿಕೃತ, 27 ಅನಧಿಕೃತ) ಮಾಡಲಾಗಿದೆ, 2016ರ ಸೆಪ್ಟಂಬರ್ ವರೆಗೂ ನಮೂನೆ-3 ( ಪುರಸಭೆ ಆಸ್ತಿತೆರಿಗೆ ಪಾವತಿಗೆ ಸಂಬಂಧಿಸಿದಂತೆ ಖಾತಾ ನಕಲು ಪಡೆದು ಅಸ್ತಿ ನೋಂದಣಿ ಇತರೆ ವ್ಯವಸ್ಥೆ ನಡೆಯುತ್ತಿತ್ತು, ಲೋಕಾಯುಕ್ತರ ಆದೇಶ ಸೇರಿದಂತೆ ಪುರಸಭೆಗೆ ಸೇರದ ಪ್ರದೇಶಕ್ಕೂ ನಮೂನೆ-3 ನೀಡುತ್ತಿರುವ ಆರೋಪ ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಇ-ಆಸ್ತಿ ತತ್ರಾಂಶ ನಿರ್ವಹಿಸಿ ಇ-ಖಾತೆ ವಿತರಣೆಗೆ ಪೌರಾಡಳಿತ ಇಲಾಖೆ ಕ್ರಮ ಕೈಗೊಂಡಿತು, ಈ ಯೋಜನೆ ಕುಂಟುತ್ತಾ ಸಾಗಿದರೂ ಇಲಾಖೆಯ ಮೇಲಾಧಿಕಾರಿಗಳ ನಿರ್ಲಕ್ಷ್ಯ, ಸ್ಥಳೀಯ ಅಧಿಕಾರಿಗಳ ಬೆಜವಾಬ್ದಾರಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯದ ಕೈವಾಡದಿಂದ ಇ-ಆಸ್ತಿ ನಿರ್ವಹಣೆ ವಿತರಣೆ ಕಾರ್ಯ ಪುರಸಭೆಯಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು.

ಪುರಸಭೆ ಮುಕ್ಯಾಧಿಕಾರಿ ಮಂಜುಳಾ ಮಾತನಾಡಿ, ಸರ್ಕಾರ ಇ-ಖಾತೆ ಅನಧಿಕೃತ, ಅಧಿಕೃತ ವಿತರಣೆ ನಿಟ್ಟಿನಲ್ಲಿ ಶೀಘ್ರದಲ್ಲೆ ಸ್ಪಷ್ಟ ನಿರ್ದೇಶನ ನೀಡುವ ಸಾಧ್ಯತೆ ಇದ್ದು ಆಸ್ತಿ ಮಾಲೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ, ಇನ್ನಾದರೂ ಸರ್ಕಾರ ನಗರ ಪ್ರದೇಶದ ಇ- ಆಸ್ತಿ ನಿರ್ವಹಣೆ ನಿಟ್ಟಿನಲ್ಲಿ ಸ್ಪಷ್ಟ ನಿಲುವು ತಳೆದು ನಾಗರಿಕರಿಗೆ ಅನುಕೂಲ ಯಾವಾಗ ಮಾಡಿ ಕೊಡುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!