ಕುಣಿಗಲ್: ತಾಲೂಕಿನ ಕೆಂಪನಹಳ್ಳಿ ಗ್ರಾಪಂ ಕಾರ್ಯಾಲಯದ ಕಿಟಕಿ ಸರಳು ಮುರಿದು ಒಳನುಗ್ಗಿರುವ ಕಳ್ಳರು ಬ್ಯಾಟರಿ ಸೇರಿದಂತೆ ಇತರೆ ವಸ್ತುಗಳನ್ನು ಕಳುವು ಮಾಡಿರುವ ಘಟನೆ ವರದಿಯಾಗಿದೆ.
ಕೆಂಪನಹಳ್ಳಿ ಗ್ರಾಪಂ ಕಚೇರಿಯ ಕಿಟಕಿ ಸರಳು ಮುರಿದು ಒಳನುಗ್ಗಿರುವ ಕಳ್ಳರು ನಾಲ್ಕು ಬ್ಯಾಟರಿ, ಯುಪಿಎಸ್, ಕಂಪ್ಯೂಟರ್, ಗ್ರಂಥಾಲಯ ಬಳಕೆಗೆ ತರಿಸಲಾಗಿದ್ದ ಟಿವಿ, ಪ್ರೊಜೆಕ್ಟರ್, 120 ಬಲ್ಬ್ ಕಳುವು ಮಾಡಿ ಸಮೀಪದಲ್ಲೆ ಇದ್ದ ಸರ್ಕಾರಿ ಶಾಲೆಯಲ್ಲೂ ಕೈ ಚಳಕ ತೋರಿಸಿ ಎರಡು ಬ್ಯಾಟರಿ, ಕಂಪ್ಯೂಟರ್ ಕಳುವು ಮಾಡಿದ್ದಾರೆ, ತಾಪಂ ಇಒ ನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದು ಘಟನೆ ಸಂಬಂಧ ಕುಣಿಗಲ್ ಪೊಲೀಸರಿಗೆ ದೂರು ನೀಡಲಾಗಿದೆ.
Get real time updates directly on you device, subscribe now.
Prev Post
Next Post
Comments are closed.