ತುಮಕೂರು: ನಗರದ ಬಿ.ಹೆಚ್.ರಸ್ತೆಯ ಜೈನ ಭವನದಲ್ಲಿ ಇಂದು ತುಮಕೂರು ವಿಭಾಗ ಮಟ್ಟದಲ್ಲಿ ನೌಕಾರರ ಸುರಕ್ಷತಾ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬೆಸ್ಕಾಂ ನೌಕರರ ಸುರಕ್ಷತಾ ಜಾಗೃತಿ ಕಾರ್ಯಗಾರವನ್ನು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ.ಬಿ.ಎಲ್. ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ದೀಪ ಬೆಳಗಿಸಿ, ಕಳೆದ ವಾರ ವಿದ್ಯುತ್ ಅವಘಡದಿಂದ ನಿಧನರಾದ ಪವರ್ ಮೆನ್ ದುರ್ಗಾ ಪ್ರಸನ್ನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭವಾದ ಸುರಕ್ಷತಾ ಜಾಗೃತಿ ಸಭೆಯಲ್ಲಿ ಬೆಸ್ಕಾಂ ತುಮಕೂರು ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ.ಬಿ.ಎಲ್. ಮಾತನಾಡಿ, ಅಧಿಕಾರಿಗಳು ಮತ್ತು ನೌಕರರು ಕಾರ್ಯ ನಿರ್ವಹಿಸುವ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು, ಕಾರ್ಯನಿರ್ವಹಿಸುವ ಸಮಯದಲ್ಲಿ ನೌಕರರು ಸುರಕ್ಷತಾ ಸಲಕರಣೆ ಉಪಯೋಗಿಸಿ ಸುರಕ್ಷತಾ ವಲಯ ನಿರ್ಮಿಸಿಕೊಂಡ ನಂತರವಷ್ಟೇ ಕೆಲಸ ಕೈಗೆತ್ತಿಕೊಳ್ಳಬೇಕು, ಇದೆಲ್ಲರದ ಜವಾಬ್ದಾರಿ ಆಯಾಯಾ ಶಾಖಾಧಿಕಾರಿಗಳ ಮೇಲಿದೆ, ನೌಕರರು ಸಹ ಒಂದಲ್ಲ, ಎರಡು ಬಾರಿ ಎಲ್ ಸಿ ಪಡೆದಿದೆಯೆ ಎಂದು ಪರಿಶೀಲಿಸಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳ ಜೊತೆಗೆ ಸುರಕ್ಷತಾ ಪರಿಕರಗಳನ್ನು ಹಾಕಿಕೊಂಡು ಕೆಲಸ ಮಾಡುವ ಮೂಲಕ ತಾವು ರಕ್ಷಣೆ ಪಡೆದುಕೊಳ್ಳಬೇಕು, ಕಂಪನಿಯನ್ನು ರಕ್ಷಿಸುವಂತೆ ಸಲಹೆ ನೀಡಿದರು.
ಬೆಸ್ಕಾಂ ತುಮಕೂರು ವಲಯದ ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಕೂಡ್ಲಗಿ ಮಾತನಾಡಿ, ವಿದ್ಯುತ್ ಕಾರ್ಯ ಮಾಡುವ ಮುನ್ನ ಸುರಕ್ಷತಾ ಸಲಕರಣ ಉಪಯೋಗಿಸುವುದು ಅತಿ ಮುಖ್ಯ, ಎಷ್ಟೇ ವರ್ಷಗಳ ಅನುಭವವಿದ್ದರೂ ನಿರ್ಲಕ್ಷ ತೋರಬಾರದು, ಉಗ್ರಾಣದಲ್ಲಿ ಸುರಕ್ಷತಾ ಸಲಕರಣೆಗಳಿದ್ದು ಎಲ್ಲಾ ಎಸ್ ಒಗಳು ಪಡೆದುಕೊಂಡು ನೌಕರರಿಗೆ ವಿತರಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಬೆಸ್ಕಾಂ ನೌಕರರು ಕೆಲಸ ನಿರ್ವಹಿಸುವಾಗ ಯಾವ ಜಾಗ್ರತೆ ತೆಗೆದುಕೊಳ್ಳಬೇಕು, ಸುರಕ್ಷತಾ ಸಲಕರಣೆ ಉಪಯೋಗಿಸಿ ಸುರಕ್ಷತಾ ವಲಯ ಏರ್ಪಡಿಸಿಕೊಂಡು ಕೆಲಸಗಳನ್ನು ನಿರ್ವಹಿಸಬೇಕು ಎಂಬುದನ್ನು ಸವಿಸ್ತಾಾರವಾಗಿ ತಿಳಿಸಿದರು.
ನಿಗಮದ ಕಾರ್ಯಾಲಯದ ಉಪ ಪ್ರಧಾನ ವ್ಯವಸ್ಥಾಪಕರಾದ ಸೌಮ್ಯ ಮಾತನಾಡಿ, ನೌಕರರ ಸುರಕ್ಷತೆಯ ಬಗ್ಗೆ ಒಂದು ವೀಡಿಯೋ ಮೂಲಕ ಸುರಕ್ಷತಾ ವಲಯವನ್ನು ಹೇಗೆ ನಿರ್ಮಿಸಿಕೊಂಡು ಕೆಲಸ ನಿರ್ವಹಿಸಬೇಕೆಂದು ತಿಳಿಸಿಕೊಟ್ಟರು.
ವಿದ್ಯುತ್ ಪರಿವೀಕ್ಷಕ ಯೋಗೀಶ್, ಉಪ ಪರಿವೀಕ್ಷಕರಾದ ಹಸೀನಾ ಭಾನು, ವಿವಿಧ ಉಪ ವಿಭಾಗಗಳ ಇಇಗಳಾದ ಮಧುಗಿರಿಯ ಜಗದೀಶ್, ತಿಪಟೂರಿನ ಸೋಮಶೇಖರ ಗೌಡ, ಕುಣಿಗಲ್ ನ ಪುರುಷೋತ್ತಮ್, ಎಇಇ ಜಲ್ದೇಶ್, ಲೆಕ್ಕಾಧಿಕಾರಿ ವೆಂಕಟೇಶ್, ಎಸ್ಸಿ, ಎಸ್ಟಿ ನೌಕರರ ಸಂಘದ ಕಾರ್ಯದರ್ಶಿ ಅಂಜಯ್ಯ, ಕೆಪಿಟಿಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಎಂ.ಹೆಚ್.ವೆಂಕಟರಮಣಯ್ಯ, ಸಂಘಟನಾ ಕಾರ್ಯದರ್ಸಿ ನರಸಿಂಹಮೂರ್ತಿ, ಎಲ್ಲಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳು, ನೌಕರರು ಪಾಲ್ಗೊಂಡಿದ್ದರು.
Comments are closed.