ಕುಣಿಗಲ್: ಮಕ್ಕಳೆ ದೇಶದ ಆಸ್ತಿ, ಮಕ್ಕಳ ಬೆಳವಣಿಗೆ ಹಂತದಲ್ಲಿ ಉತ್ತಮ ಪ್ರೋತ್ಸಾಹ, ಸಹಕಾರ ನೀಡಿದಲ್ಲಿ ಅವರಲ್ಲಿ ವಿವಿಧ ರೀತಿಯ ಸೃಜನೆಶೀಲತೆ ಬೆಳೆದು ಮುಂದೆ ಉತ್ತಮ ಪ್ರಜೆಗಳಾಗಿ ದೇಶಕಟ್ಟುವ ಯೋಧರಾಗುತ್ತಾರೆ ಎಂದು ಮಾಜಿ ಶಾಸಕ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿ ಗೌಡ ಹೇಳಿದರು.
ಪಟ್ಟಣದಲ್ಲಿ ಒಕ್ಕಲಿಗರ ಸಂಘದ ಅಶ್ರಯದಲ್ಲಿ ನಡೆಯುತ್ತಿರುವ ಜ್ಞಾನ ಭಾರತಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ದೇಶದ ಪ್ರಧಾನಿ ಜವಹರ್ ಲಾಲ್ ನೆಹರು ಮಕ್ಕಳೊಂದಿಗೆ ಅವಿನಾಭಾವ ಸಂಬಂಧ ಹೊದಿದ್ದು ಎಲ್ಲೆ ಹೋದರು ಮಕ್ಕಳೊಂದಿಗೆ ಬೆರೆತು ಮಕ್ಕಳಾಗೆ ಇರುತ್ತಿದ್ದ ಕಾರಣ ಅವರನ್ನು ಮಕ್ಕಳು ಚಾಚಾ ಎಂದು ಕರೆಯತೊಡಗಿದ್ದು ಪ್ರಧಾನಿ ನೆಹರು ಚಾಚ ನೆಹರು ಎಂದೆ ಖ್ಯಾತರಾದರು, ಅವರ ಮಹದಾಸೆಯಂತೆ ಅವರ ಜನ್ಮದಿನದಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಮಕ್ಕಳಲ್ಲಿನ ಪ್ರತಿಭೆ, ಕೌಶಲ್ಯ, ಸೃಜನಶೀಲತೆ ಹೊರ ಹೊಮ್ಮಲು ಹಲವು ಕಾರ್ಯಕ್ರಮ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿನಿ ಗೀತಾಂಜಲಿ, ಪ್ರಧಾನಿ ಜವಹರ್ ಲಾಲ್ ನೆಹರು ದೇಶ ಕಂಡ ಅತ್ಯುತ್ತಮ ಪ್ರಧಾನಿ, ದೇಶ ನಿರ್ಮಾಣಕ್ಕೆ ಪೂರಕವಾಗಿ ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳ ಸಮಗ್ರ ಅಭಿವೃದ್ಧಿ ಮುಖ್ಯ ಎಂದೆ ಪ್ರತಿಪಾದಿಸಿದ ಚಾಚಾ ನೆಹರು, ಮಕ್ಕಳ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಪ್ರೋತ್ಸಾಹಕರ ಕಾರ್ಯಕ್ರಮ ನೀಡಿ ಹುರಿ ದುಂಬಿಸಿದರು.
ಇಂದಿನ ದಿನಗಳಲ್ಲಿ ಮಾಜಿ ಪ್ರಧಾನಿ ಮಕ್ಕಳಿಗೆ ಹತ್ತಿರವಾಗಿ ಮಕ್ಕಳ ಸರ್ವತೋಮುಖ ಏಳಿಗೆಗೆ ಅವರ ಕೊಡುಗೆ ನೀಡಿರುವ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಾದ ಅಗತ್ಯತೆ ಹೆಚ್ಚಿದೆ ಎಂದರು.
ಬಹುಮಾನ ವಿನಿಯೋಗಿಸಿ ಮಾತನಾಡಿದ ವಿದ್ಯಾರ್ಥಿನಿ ತನುಶ್ರೀ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಕಾರ್ಯಕ್ರಮದ ಜವಾಬ್ದಾರಿ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಇಂದಿನ ಮಕ್ಕಳೆ ದೇಶದ ಪ್ರಜೆಗಳು ಎಂದು ಬಿಂಬಿತವಾದರೂ ಮಕ್ಕಳಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕುಗಳು, ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅನುಷ್ಠಾನಗೊಳಿಸಿದಾಗ ಚಾಚಾ ನೆಹರು ಕಂಡ ಕನಸು ನನಸಾಗುತ್ತದೆ ಎಂದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾಸಂಸ್ಥೆಯಲ್ಲಿ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಿ ಕಾರ್ಯಕ್ರಮದ ಅಧ್ಯಕ್ಷತೆ ನಿರೂಪಣೆ, ಬಹುಮಾನ ವಿತರಣೆ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡಲಾಗಿತ್ತು, ಶಿಕ್ಷಕರು ಆಕರ್ಷಕ ವೇಶಭೂಷಣ ಧರಿಸಿ ನೃತ್ಯ, ಮನರಂಜನೆ ಕಾರ್ಯಕ್ರಮ ನೀಡುವ ಮೂಲಕ ಮಕ್ಕಳನ್ನು ರಂಜಿಸಿದರು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಗಿರೀಶ್, ಖಜಾಂಚಿ ಚೆನ್ನಪ್ಪ, ನಿರ್ದೇಶಕರಾದ ಲಕ್ಷ್ಮಣಗೌಡ, ಬೆಟ್ಟಸ್ವಾಮಿ, ಶಿವಣ್ಣಗೌಡ, ಪ್ರಾಚಾರ್ಯ ಗೋವಿಂದೇಗೌಡ, ಮುಖ್ಯೋಪಾಧ್ಯಯರಾದ ಕಪಿನಿಪಾಳ್ಯ ರಮೇಶ, ಕೆ.ಜಿ.ಪ್ರಕಾಶ್, ಗಂಗಮ್ಮ, ವಕೀಲ ಶ್ರೀನಿವಾಸಗೌಡ ಇತರರು ಇದ್ದರು.
Comments are closed.