ತುಮಕೂರು: ಜಿಲ್ಲೆಯಾದ್ಯಂತ ಇಂದು 916 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 31,638 ಏರಿಕೆ ಕಂಡಿದೆ. 4,197 ಸಕ್ರಿಯ ಪ್ರಕರಣಗಳ ಪೈಕಿ 235 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 272 ಮಂದಿಗೆ ಸೋಂಕು ತಗುಲಿದೆ. ಸಾರ್ವಜನಿಕರಲ್ಲಿ ಎಷ್ಟೇ ಅರಿವು ಮೂಡಿಸಿದರೂ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರೂ ಪ್ರಯೋಜನವಾಗುತ್ತಿಲ್ಲ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ. ನಗರದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ನಾಗರೀಕರು ಉಡಾಫೆ ಮನೋಭಾವನೆ ತೋರುತ್ತಿದ್ದಾರೆ, ಈ ಬಗ್ಗೆ ಜಾಗೃತರಾಗದೇ ಇದ್ದರೇ ತುಮಕೂರು ನಗರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.
ಶಿರಾದಲ್ಲಿ ಒಂದೇ ದಿನ 148 ಮಂದಿಗೆ ಸೋಂಕು ದೃಢವಾಗಿದ್ದು ತಾಲ್ಲೂಕು ಆಡಳಿತ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಉಳಿದ ತಾಲ್ಲೂಕುಗಳಾದ ಚಿನಾಹಳ್ಳಿ 50, ಗುಬ್ಬಿ 67, ಕೊರಟಗೆರೆ 47, ಕುಣಿಗಲ್ 59, ಮಧುಗಿರಿ 53, ಪಾವಗಡ 83, ತಿಪಟೂರು 94, ತುರುವೇಕೆರೆಯಲ್ಲಿ 43 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಇಬ್ಬರು ಮೃತಪಟ್ಟಿದ್ದಾರೆ, ಕೋವಿಡ್ ಸೋಂಕಿನಿಂದ ತುಮಕೂರಿನ ಪಿ.ಎನ್.ಆರ್ ಪಾಳ್ಯ ಗ್ರಾಮದ ಮಹಿಳೆ(55) ಮತ್ತು ಕುಣಿಗಲ್ ತಾಲೂಕಿನ ಹೆರೂರು ಗ್ರಾಮದ ಮಹಿಳೆ(68) ಮೃತರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Get real time updates directly on you device, subscribe now.
Prev Post
Next Post
Comments are closed.